ADVERTISEMENT

ಸಮಾಜ ಸೇವಾ ಕಾರ್ಯಕ್ಕೆ ‘ಸಂತೆ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 20:00 IST
Last Updated 26 ಸೆಪ್ಟೆಂಬರ್ 2013, 20:00 IST
ಕಮ್ಯುನಿಟಿ ಸರ್ವಿಸಸ್ ಆಫ್‌ ಬೆಂಗಳೂರು ಸಂಸ್ಥೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆದ ‘ಚಾರಿಟಿ ಸಂತೆ’ಯಲ್ಲಿ ವಿವಿಧ ಉತ್ಪನ್ನಗಳನ್ನು ಮಹಿಳೆಯರು ವೀಕ್ಷಿಸಿದರು                           –ಪ್ರಜಾವಾಣಿ ಚಿತ್ರ
ಕಮ್ಯುನಿಟಿ ಸರ್ವಿಸಸ್ ಆಫ್‌ ಬೆಂಗಳೂರು ಸಂಸ್ಥೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆದ ‘ಚಾರಿಟಿ ಸಂತೆ’ಯಲ್ಲಿ ವಿವಿಧ ಉತ್ಪನ್ನಗಳನ್ನು ಮಹಿಳೆಯರು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಮ್ಯುನಿಟಿ ಸರ್ವಿಸಸ್ ಆಫ್‌ ಬೆಂಗಳೂರು ಸಂಸ್ಥೆಯ ವತಿಯಿಂದ ‘ಚಾರಿಟಿ ಸಂತೆ’ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆಯಿತು.

ಸಂತೆಗೆ ಹಿರಿಯ ಕಲಾವಿದೆ ವಿಮಲಾ ರಂಗಾಚಾರ್‌ ಚಾಲನೆ ನೀಡಿ, ‘ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸದಸ್ಯರ ಬದ್ಧತೆ ಹಾಗೂ ಸಮು ದಾಯದ ಸಹಾಯದಿಂದ ಸಂಸ್ಥೆ ಈ ಕಾರ್ಯ ಮಾಡುತ್ತಿದೆ ಎಂದರು.

ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯ ಗಳನ್ನು ಹಮ್ಮಿಕೊಳ್ಳಲಿ’ ಎಂದು ಅವರು ಹಾರೈಸಿದರು.

ಮಧು ನಟರಾಜ್‌, ಸುಜಾತಾ ಮೆಹ್ತಾ, ಸಂಸ್ಥೆಯ ಮುಖ್ಯಸ್ಥೆ ನಂದಿನಿ ನಾಗರಕಟ್ಟಿ ಮತ್ತಿತರರು ಹಾಜರಿದ್ದರು. ಬೆಳಿಗ್ಗೆಯಿಂದ ಸಂಜೆ ವರೆಗೆ ನಡೆದ ಸಂತೆಯಲ್ಲಿ 54ಕ್ಕೂ ಅಧಿಕ ಮಳಿಗೆಗಳು ಇದ್ದವು.

ಸಂಸ್ಥೆಯ ಸದಸ್ಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು, ಮನೆಯಲ್ಲೇ ತಯಾರಿಸಿದ ಕೇಕ್‌, ಜಾಮ್‌, ಉಪ್ಪಿನಕಾಯಿ, ನಾನಾ ಬಗೆಯ ಕಲಾಕೃತಿಗಳು ಈ ಸಂದರ್ಭದಲ್ಲಿ ಪ್ರದರ್ಶನ ಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.