ADVERTISEMENT

`ಸಿಟಿಯು ಮುಷ್ಕರ ಬೆಂಬಲಿಸಿ'

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 19:37 IST
Last Updated 15 ಫೆಬ್ರುವರಿ 2013, 19:37 IST
ಸಿಐಟಿಯು ಪೂರ್ವ ವಲಯ ಸಮಿತಿಯು ಕೃಷ್ಣರಾಜಪುರದಲ್ಲಿ ಆಯೋಜಿಸಿದ್ದ ಪ್ರಚಾರಾಂದೋಲನ ಸಭೆಯಲ್ಲಿ  ಸಿಐಟಿಯುನ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ಮೀನಾಕ್ಷಿಸುಂದರಂ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ, ಸಮಿತಿ ಕಾರ್ಯದರ್ಶಿ ಪಿ.ಮುನಿರಾಜು ಇದ್ದರು
ಸಿಐಟಿಯು ಪೂರ್ವ ವಲಯ ಸಮಿತಿಯು ಕೃಷ್ಣರಾಜಪುರದಲ್ಲಿ ಆಯೋಜಿಸಿದ್ದ ಪ್ರಚಾರಾಂದೋಲನ ಸಭೆಯಲ್ಲಿ ಸಿಐಟಿಯುನ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ಮೀನಾಕ್ಷಿಸುಂದರಂ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ, ಸಮಿತಿ ಕಾರ್ಯದರ್ಶಿ ಪಿ.ಮುನಿರಾಜು ಇದ್ದರು   

ಕೃಷ್ಣರಾಜಪುರ: `ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಜನ ವಿರೋಧಿ ನೀತಿಗಳಿಂದ ಗಂಭೀರ ಸಮಸ್ಯೆಗಳು ಎದುರಾಗಿವೆ. ಸರ್ಕಾರಗಳ ಗಮನ ಸೆಳೆಯಲು ಈ ತಿಂಗಳ 20- 21ರಂದು ನಡೆಸಲಿರುವ ರಾಷ್ಟ್ರ ವ್ಯಾಪಿ  ಮುಷ್ಕರವನ್ನು ಎಲ್ಲರೂ ಬೆಂಬಲಿಸಬೇಕು' ಎಂದು ಸಿಐಟಿಯುನ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ಮೀನಾಕ್ಷಿ ಸುಂದರಂ ಮನವಿ ಮಾಡಿದರು.

ಸಿಐಟಿಯು ಪೂರ್ವ ವಲಯ ಸಮಿತಿ ಏರ್ಪಡಿಸಿದ್ದ ಪ್ರಚಾರಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು, ಕಾರ್ಮಿಕರ ಪರ ಕಾನೂನುಗಳನ್ನು ಜಾರಿಗೊಳಿಸದಿರುವುದು- ಇವೇ ಮೊದಲಾದ ಜನ ದ್ರೋಹಿ ಕ್ರಮಗಳನ್ನು ಖಂಡಿಸಿ ಮುಷ್ಕರ ನಡೆಸಲಾಗುವುದು' ಎಂದು ತಿಳಿಸಿದರು.

ಸಿಐಟಿಯುನ ನಗರ ಜಿಲ್ಲಾ ಸಂಘಟನೆಗಳ ಅಧ್ಯಕ್ಷ ಎಚ್.ಎನ್.ಗೋಪಾಲಗೌಡ, `ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜನಸಾಮಾನ್ಯನ ಬದುಕು ಅತಂತ್ರ ಸ್ಥಿತಿ ತಲುಪಿದೆ. ರೈತರು, ದುಡಿಯುವ ಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ' ಎಂದರು.

ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಗೌರಮ್ಮ, `ಜನಪ್ರತಿನಿಧಿಗಳು ಮತ ಬ್ಯಾಂಕ್ ದೃಷ್ಟಿಯಲ್ಲಿಟ್ಟುಕೊಂಡು ಸೀರೆ, ಅಕ್ಕಿ ಮತ್ತು ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಧರ್ಮಸ್ಥಳ, ಓಂಶಕ್ತಿ ಇತರೆ ದೇವಸ್ಥಾನಗಳಿಗೆ ಬಸ್ಸುಗಳಲ್ಲಿ ಜನರನ್ನು ಕಳಿಸುತ್ತಿದ್ದಾರೆ. ಇವು ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದಿಲ್ಲ' ಎಂದು ದೂರಿದರು.

ಪೂರ್ವ ವಲಯ ಸಮಿತಿಯ ಅಧ್ಯಕ್ಷ ರಮೇಶ್, ಡಿವೈಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷ ನಂಜೇಗೌಡ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.