ADVERTISEMENT

ಸ್ನಾತಕೋತ್ತರ ಪ್ರವೇಶಕ್ಕಾಗಿ 8ಸಾವಿರ ಅರ್ಜಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಪ್ರವೇಶಕ್ಕೆ ಈ ವರೆಗೆ 4480 ವಿದ್ಯಾರ್ಥಿನಿಯರು ಹಾಗೂ 4293 ವಿದ್ಯಾರ್ಥಿಗಳು ಸೇರಿದಂತೆ 8773 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ವಿಜ್ಞಾನ ವಿಭಾಗಕ್ಕೆ 4191, ಕಲಾ ವಿಭಾಗಕ್ಕೆ 3340, ವಾಣಿಜ್ಯ ವಿಭಾಗಕ್ಕೆ 2764, ಶಿಕ್ಷಣ ವಿಭಾಗಕ್ಕೆ 766, ಕಾನೂನು ವಿಭಾಗಕ್ಕೆ 163 ಅರ್ಜಿಗಳು ಸಲ್ಲಿಕೆಯಾಗಿವೆ. ಪರಿಶಿಷ್ಟ ಜಾತಿಯ 2018, ಪರಿಶಿಷ್ಟ ಪಂಗಡದ 458 ಮಂದಿ, 439 ಮಂದಿ ಪ್ರವರ್ಗ 1, 1351 ಮಂದಿ 2ಎ, 315 ಮಂದಿ 2ಬಿ, 1885 ಮಂದಿ 3ಎ, 519 ಮಂದಿ 3 ಬಿ, ಜನರಲ್ ಮೆರಿಟ್‌ನ 1788 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರೀಕೃತ ಸ್ನಾತಕೋತ್ತರ ದಾಖಲಾತಿ ಸಮಿತಿಯ ಅಧ್ಯಕ್ಷ ಎಂ.ಸಿ. ರಾಧಾಕೃಷ್ಣ ತಿಳಿಸಿದ್ದಾರೆ.

ಮೆರಿಟ್ ವಿದ್ಯಾರ್ಥಿಗಳ ಮೊದಲ ಪಟ್ಟಿ ಇದೇ 23ರಂದು ಪ್ರಕಟಗೊಳ್ಳಲಿದೆ. ವಿವಿ ವೆಬ್‌ಸೈಟ್‌ನಲ್ಲಿ ಸಹ ಈ ಪಟ್ಟಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಿದ್ದುಪಡಿ ಇದ್ದರೆ 25ರೊಳಗೆ ಸಮಿತಿ ಗಮನಕ್ಕೆ ತರಬೇಕು. ಅಂತಿಮ ಪಟ್ಟಿ 28ರಂದು ಪ್ರಕಟಿಸಲಾಗುವುದು.

ಕೌನ್ಸೆಲಿಂಗ್ ಪ್ರಕ್ರಿಯೆ ಆಗಸ್ಟ್ 30ರಂದು ಆರಂಭಗೊಳ್ಳಲಿದೆ. ಸೂಪರ್‌ನ್ಯೂಮರರಿ ಸೀಟುಗಳಿಗೆ 30ರಂದು, ವಾಣಿಜ್ಯ ವಿಭಾಗಕ್ಕೆ ಇದೇ 31 ಹಾಗೂ ಸೆಪ್ಟೆಂಬರ್ 1ರಂದು, ಕಾನೂನು ಹಾಗೂ ಶಿಕ್ಷಣ ವಿಭಾಗಕ್ಕೆ ಸೆ.3ರಂದು, ವಿಜ್ಞಾನ ವಿಭಾಗಕ್ಕೆ ಸೆ.4ರಿಂದ 6ರ ವರೆಗೆ, ಕಲಾ ವಿಭಾಗಕ್ಕೆ ಸೆ.7ರಿಂದ 9ರ ವರೆಗೆ ಕೌನ್ಸೆಲಿಂಗ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.