ADVERTISEMENT

ಹಾಕಿಂಗ್‌ಗೆ ವಿಶೇಷ ಅಂಚೆ ಲಕೋಟೆ ಗೌರವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:54 IST
Last Updated 20 ಮಾರ್ಚ್ 2018, 19:54 IST
ಎ.ಎಸ್.ಕಿರಣ್‌ಕುಮಾರ್ (ಎರಡನೆಯವರು) ಲಕೋಟೆ ಬಿಡುಗಡೆಗೊಳಿಸಿದರು. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಡಾ.ಚಾರ್ಲ್ಸ್‌ ಲೋಬೊ, ಪೋಸ್ಟ್ ಮಾಸ್ಟರ್ ಜನರಲ್ ಅರವಿಂದ್ ವರ್ಮ ಇದ್ದಾರೆ -
ಎ.ಎಸ್.ಕಿರಣ್‌ಕುಮಾರ್ (ಎರಡನೆಯವರು) ಲಕೋಟೆ ಬಿಡುಗಡೆಗೊಳಿಸಿದರು. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಡಾ.ಚಾರ್ಲ್ಸ್‌ ಲೋಬೊ, ಪೋಸ್ಟ್ ಮಾಸ್ಟರ್ ಜನರಲ್ ಅರವಿಂದ್ ವರ್ಮ ಇದ್ದಾರೆ -   

ಬೆಂಗಳೂರು: ದೈಹಿಕ ನ್ಯೂನತೆಯ ನಡುವೆ ಅಸಾಮಾನ್ಯ ಜ್ಞಾನದಿಂದ ಖ್ಯಾತರಾಗಿದ್ದ ಬ್ರಿಟಿಷ್‌ ಖಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ (76) ಸ್ಮರಣಾರ್ಥ ಅಂಚೆ ಇಲಾಖೆಯು ಮಂಗಳವಾರ ವಿಶೇಷ ಅಂಚೆ ಲಕೋಟೆಯನ್ನು ಹೊರ ತಂದಿದೆ.

ಬಾಹ್ಯಾಕಾಶ ವಿಜ್ಞಾನಿ ಎ.ಎಸ್.ಕಿರಣ್‌ ಕುಮಾರ್ ಅವರು ವಿಶೇಷ ಲಕೋಟೆಯನ್ನು ಬಿಡುಗಡೆಗೊಳಿಸಿದರು.

ಗಾಲಿಕುರ್ಚಿಯಲ್ಲಿ ಕುಳಿತ ಸ್ಟೀಫನ್ ಅವರ ಚಿತ್ರ ಹಾಗೂ ಅವರ ಜೀವಿತಾವಧಿಯನ್ನು (1942–2018) ಲಕೋಟೆ ಮೇಲೆ ಉಲ್ಲೇಖಿಸಲಾಗಿದೆ. ಅದರ ಹಿಂಭಾಗದಲ್ಲಿ ಕುರಿತ ಕಿರು ಪರಿಚಯವಿದೆ. ಸೀಮಿತ ದಿನಗಳವರೆಗೆ ಅವುಗಳನ್ನು ಮಾರಾಟ ಮಾಡಲಾಗುತ್ತದೆ.

ADVERTISEMENT

ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೊ, ‘ ಸ್ಟೀಫನ್ ಅವರಿಗೆ ಗೌರವ ಸಲ್ಲಿಸುವ ಹಾಗೂ ಅವರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಲಕೋಟೆ ಹೊರತರಲಾಗಿದೆ. ನಗರದ ಪ್ರಧಾನ ಅಂಚೆ ಕಚೇರಿಯ ವಿಶೇಷ ಅಂಚೆ ಚೀಟಿ ಸಂಗ್ರಹಾಲಯ ಹಾಗೂ ರಾಜ್ಯದ ಎಲ್ಲ ಮುಖ್ಯ ಅಂಚೆ ಕಚೇರಿಗಳಲ್ಲಿ ಇದು ಲಭ್ಯ’ ಎಂದರು.

ಕಿರಣ್ ಕುಮಾರ್ ಮಾತನಾಡಿ, ‘ವೈಯಕ್ತಿಕ ವೈಫಲ್ಯಗಳನ್ನು ಮೀರಿ ಅವರು ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ ಯಶಸ್ವಿಯಾಗಿದ್ದಾರೆ. ಅವರ ಅಪೂರ್ಣ ಕೆಲಸಗಳನ್ನು ಮುಂದುವರೆಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

‘ಬ್ರಹ್ಮಾಂಡದ ಉಗಮ, ಬಿಗ್‌ ಬ್ಯಾಂಗ್ ಥಿಯರಿ (ಮಹಾಸ್ಫೋಟ) ಮತ್ತು ಕಪ್ಪುರಂಧ್ರ ಸಿದ್ಧಾಂತಗಳನ್ನು ನೀಡಿದ ಹಾಕಿಂಗ್‌ ಅವರನ್ನು ಶತಮಾನದ ವಿಜ್ಞಾನಿ ಎಂದು ಪರಿಗಣಿಸಲಾಗಿತ್ತು. ಸರ್‌ ಐಸಾಕ್‌ ನ್ಯೂಟನ್‌ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್‌ ನಂತರ ಜಗತ್ತು ಕಂಡ ಅಸಾಮಾನ್ಯ ವಿಜ್ಞಾನಿ ಎಂಬ ಗೌರವ ಸ್ಟೀಫನ್‌ ಅವರಿಗೆ ಸಿಕ್ಕಿದೆ’ ಎಂದರು.

ಅಂಕಿ–ಅಂಶ

2,000

ವಿಶೇಷ ಅಂಚೆ ಲಕೋಟೆ ಮುದ್ರಿಸಲಾಗಿದೆ

₹20

ಅಂಚೆ ಲಕೋಟೆಯ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.