ಬೆಂಗಳೂರು: ನಗರದ ಕೋರಮಂಗಲದ ಎರಡು ಹುಕ್ಕಾ ಬಾರ್‌ಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿರುವ ಪೊಲೀಸರು ಏಳು ಜನರನ್ನು ಬಂಧಿಸಿ, 15 ಹುಕ್ಕಾ ಉಪಕರಣಗಳು ಹಾಗೂ 20 ತಂಬಾಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋರಮಂಗಲ ಐದನೇ ಹಂತದ ಎಡನೀರು ರಸ್ತೆಯ ಸುಫಿ ಕೆಫೆಯ ಮೇಲೆ ದಾಳಿ ನಡೆಸಿದ ಪೊಲೀಸರು ಹುಕ್ಕಾ ಬಾರ್ ನಡೆಸುತ್ತಿದ್ದ ಇರಾನಿ ಮೂಲದ ಮಹಿಳೆ ಮೊಸಾಕಾಬ್ (44), ಕೇರಳ ಮೂಲದ ಸಿದ್ಧಾರ್ಥ (27) ಮತ್ತು ರೀಲಾ (19) ಎಂಬುವರನ್ನು ಬಂಧಿಸಿ 10 ಹುಕ್ಕಾ ಉಪಕರಣಗಳು,10 ತಂಬಾಕುಪ್ಯಾಕೆಟ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಮಾಲಿಕ ಮಹಮ್ಮದ್ ಖರೀನಿ ಪರಾರಿಯಾಗಿದ್ದಾನೆ.
ಸಮೀಪದಲ್ಲೇ ಇರುವ ಕೇಪ್‌ಟಾನ್ ಕೆಫೆ ಮೇಲೆಯೂ ದಾಳಿ ನಡೆಸಿರುವ ಪೊಲೀಸರು ಬಾರ್ ನಡೆಸುತ್ತಿದ್ದ ಕೇರಳ ಮೂಲದ ನಿಹಾಬ್ (19), ನಿಹಾಲ್ (22), ಸಲ್ಮಾನ್ (19) ಮತ್ತು ಮುರಳಿ (24) ಎಂಬುವರನ್ನು ಬಂಧಿಸಿ ಐದು ಹುಕ್ಕಾ ಉಪಕರಣಗಳು ಹಾಗೂ 10 ತಂಬಾಕು ಪ್ಯಾಕೆಟ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಾರ್ ಮಾಲೀಕ ಫೈಜಲ್ ತಲೆ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಸುಧೀಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.