ADVERTISEMENT

ಹೊಸಕೆರೆ ಅಭಿವೃದ್ಧಿಗೆ ಕೊನೆಗೂ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:03 IST
Last Updated 13 ನವೆಂಬರ್ 2017, 20:03 IST
ಹೊಸಕೆರೆ ಅಭಿವೃದ್ಧಿಗೆ ಕೊನೆಗೂ ಮುಹೂರ್ತ
ಹೊಸಕೆರೆ ಅಭಿವೃದ್ಧಿಗೆ ಕೊನೆಗೂ ಮುಹೂರ್ತ   

ಬೆಂಗಳೂರು: ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉಲ್ಲಾಳು ವಾರ್ಡ್‌ನ ಗಾಂಧಿನಗರ ಹೊಸಕೆರೆ ಅಭಿವೃದ್ಧಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₹3.09 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸುತ್ತಿದ್ದು, ಶಾಸಕ ಎಸ್‌.ಟಿ. ಸೋಮಶೇಖರ್‌ ಇದಕ್ಕೆ ಚಾಲನೆ ನೀಡಿದರು. ‘ಸುಂದರ ಪರಿಸರ ನಿರ್ಮಾಣ ಮಾಡಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಂಡಿದ್ದು ಮಾದರಿ ಕೆರೆಯನ್ನಾಗಿ ಮಾಡಲು ದೃಢಸಂಕಲ್ಪ ಮಾಡಲಾಗಿದೆ’ ಎಂದು ತಿಳಿಸಿದರು. ಕೊಳಚೆ ನೀರು ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

‘ಸುತ್ತಮುತ್ತಲಿನ ಬಡಾವಣೆಗಳ ಒಳಚರಂಡಿ ನೀರು ಹರಿದು ಬಂದು ಜಲಮೂಲ ಸಂಪೂರ್ಣ ಮಲೀನಗೊಂಡಿತ್ತು. ಕೆರೆ ಅಭಿವೃದ್ಧಿಗೆ ನಾಗರಿಕರು ಹೋರಾಟ ನಡೆಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಮೂರು ಸಲ ವರದಿ ಪ್ರಕಟಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.