ADVERTISEMENT

142 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಆರ್‌.ರೋಷನ್‌ ಬೇಗ್‌, ಕೃಷ್ಣ ಬೈರೇಗೌಡ, ಎನ್‌.ಎ.ಹ್ಯಾರಿಸ್‌ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:02 IST
Last Updated 23 ಏಪ್ರಿಲ್ 2018, 19:02 IST

ಬೆಂಗಳೂರು: ಸಚಿವರಾದ ಆರ್‌.ರೋಷನ್‌ ಬೇಗ್‌ ಹಾಗೂ ಕೃಷ್ಣ ಬೈರೇಗೌಡ, ಶಾಸಕ ಎನ್‌.ಎ.ಹ್ಯಾರಿಸ್‌ ಸೇರಿದಂತೆ 142 ಮಂದಿ ಸೋಮವಾರ ನಾಮಪತ್ರ ಸಲ್ಲಿಸಿದರು.

ರಾಜರಾಜೇಶ್ವರಿನಗರದಿಂದ ಬಿಜೆಪಿಯ ಪಿ.ಎಂ.ಮುನಿರಾಜು ಗೌಡ, ಕಾಂಗ್ರೆಸ್‌ನ ಜೆ.ಸಂತೋಷ್‌ ಕುಮಾರ್‌, ಶಿವಾಜಿನಗರದಿಂದ ಕಾಂಗ್ರೆಸ್‌ನ ಆರ್‌.ರೋಷನ್‌ ಬೇಗ್‌, ಶಾಂತಿನಗರದಿಂದ ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಹಾಗೂ ಐ.ರಾಜನ್‌, ಜೆಡಿಎಸ್‌ನ ಎನ್‌.ಆರ್‌.ಶ್ರೀಧರ್‌ ರೆಡ್ಡಿ, ಗಾಂಧಿನಗರದಿಂದ ಬಿಜೆಪಿಯ ಎ.ಆರ್‌.ಸಪ್ತಗಿರಿ ಗೌಡ, ರಾಜಾಜಿನಗರದಿಂದ ಜೆಡಿಎಸ್‌ನ ಎಚ್‌.ಎಂ.ಕೃಷ್ಣಮೂರ್ತಿ, ಚಾಮರಾಜಪೇಟೆಯಿಂದ ಬಿಜೆಪಿಯ ಎಂ.ಲಕ್ಷ್ಮಿನಾರಾಯಣ, ಜೆಡಿಎಸ್‌ನ ಬಿ.ಕೆ.ಅಲ್ತಾಫ್‌ ಖಾನ್‌, ಮಲ್ಲೇಶ್ವರದಿಂದ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕಾಂಗ್ರೆಸ್‌ನ ಕೆಂಗಲ್‌ ಶ್ರೀಪಾದರೇಣು, ಜೆಡಿಎಸ್‌ನ ಎನ್‌.ಮಧುಸೂದನ್‌ ಉಮೇದುವಾರಿಕೆ ಸಲ್ಲಿಸಿದರು.

ಹೆಬ್ಬಾಳದಿಂದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಆಮ್‌ ಆದ್ಮಿ ಪಕ್ಷದಿಂದ ರಾಘವೇಂದ್ರ ಕೆ.ಥಾಣೆ, ಜೆಡಿಎಸ್‌ನ ಹನುಮಂತಗೌಡ, ಕಾಂಗ್ರೆಸ್‌ನ ಅಂಜನ್‌ ಕುಮಾರ್‌ ಗೌಡ, ಪುಲಿಕೇಶಿನಗರದಿಂದ ಆಮ್‌ ಆದ್ಮಿ ಪಕ್ಷದ ಆರ್‌.ಸಿದ್ದಗಂಗಯ್ಯ, ಜೆಡಿಎಸ್‌ನ ಪ್ರಸನ್ನಕುಮಾರ್‌, ಸರ್ವಜ್ಞನಗರದಿಂದ ಬಿಜೆಪಿಯ ಮುನಿನಾಗ ರೆಡ್ಡಿ, ಜೆಡಿಎಸ್‌ನ ಅನ್ವರ್‌ ಷರೀಫ್‌, ಸಿ.ವಿ.ರಾಮನ್‌ ನಗರದಿಂದ ಜೆಡಿಎಸ್‌ನ ಪಿ.ರಮೇಶ್‌, ಬಿಜೆಪಿಯ ಎಸ್‌.ರಘು, ಪದ್ಮನಾಭನಗರದಿಂದ ಕಾಂಗ್ರೆಸ್‌ನ ಎಂ.ಶ್ರೀನಿವಾಸ್‌, ಬಿ.ಟಿ.ಎಂ ಬಡಾವಣೆಯಿಂದ ಬಿಜೆಪಿಯ ಲಲ್ಲೇಶ್‌ ರೆಡ್ಡಿ, ಆಮ್‌ ಆದ್ಮಿ ಪಕ್ಷದ ಡಾ.ಸೈಯದ್‌ ಅಸದ್‌ ಅಬ್ಬಾಸ್‌, ಜೆಡಿಯುನ ಕೆ.ದೇವದಾಸ್‌, ಜಯನಗರದಿಂದ ಬಿಜೆಪಿಯ ಬಿ.ಎನ್‌.ವಿಜಯ್‌ಕುಮಾರ್‌, ಯಲಹಂಕದಿಂದ ಕಾಂಗ್ರೆಸ್‌ನ ಎಂ.ಎನ್‌.ಗೋಪಾಲಕೃಷ್ಣ, ಬ್ಯಾಟರಾಯನಪುರದಿಂದ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಟಿ.ದಾಸರಹಳ್ಳಿಯಿಂದ ಜೆಡಿಎಸ್‌ನ ಆರ್‌.ಮಂಜುನಾಥ್‌, ಕಾಂಗ್ರೆಸ್‌ನಿಂದ ಪಿ.ಎನ್‌.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದರು.

ADVERTISEMENT

ಮಹದೇವಪುರದಿಂದ ಬಿಜೆಪಿಯ ಅರವಿಂದ ಲಿಂಬಾವಳಿ, ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌, ಆಮ್‌ ಆದ್ಮಿ ಪಕ್ಷದ ಬಿ.ಆರ್‌.ಭಾಸ್ಕರ್‌ ಪ್ರಸಾದ್‌, ಸ್ವರಾಜ್‌ ಇಂಡಿಯಾದ ಪಿ.ರಮೇಶ್‌ ಚಂದರ್‌, ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್‌ನ ಆರ್‌.ಕೆ.ರಮೇಶ್‌, ಜೆಡಿಎಸ್‌ನ ಆರ್‌.ಪ್ರಭಾಕರ ರೆಡ್ಡಿ, ಆನೇಕಲ್‌ನಿಂದ ಕಾಂಗ್ರೆಸ್‌ನ ಬಿ.ಶಿವಣ್ಣ, ಬಹುಜನ ಸಮಾಜ ಪಕ್ಷದಿಂದ ಬಿ.ಶ್ರೀನಿವಾಸ್‌ ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.