ADVERTISEMENT

2ನೇ ಸುತ್ತಿನ ಲಾಟರಿ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:11 IST
Last Updated 24 ಮೇ 2018, 19:11 IST

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅಡಿ ಎರಡನೇ ಹಂತದ ಲಾಟರಿ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದ್ದು, 12,954 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಎರಡನೇ ಸುತ್ತಿನಲ್ಲಿ 53,821 ಸೀಟುಗಳು ಲಭ್ಯವಿದ್ದು, 1,21,732 ಅರ್ಜಿಗಳನ್ನು ಲಾಟರಿಗೆ ಪರಿಗಣಿಸಲಾಗಿತ್ತು. ಸಂಬಂಧಿಸಿದ ಪೋಷಕರು ಇದೇ 31ರೊಳಗೆ ಸಂಬಂಧಿಸಿದ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸೀಟುಗಳು ರದ್ದಾಗುತ್ತವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT