ಬೆಂಗಳೂರು: ನಾಗರಿಕರು ತಮ್ಮ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ದನಿ ಎತ್ತಲು ಸಂಸದ ರಾಜೀವ್ ಚಂದ್ರ ಶೇಖರ್ ಅವರು `ಆಸ್ಕ್' ಎಂಬ ಅಭಿಯಾನ ಆರಂಭಿಸಿದ್ದಾರೆ. ಸಾರ್ವಜನಿಕರು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಪ್ರಶ್ನೆ ಗಳು, ದೂರುಗಳನ್ನು ಆಗಸ್ಟ್ 5ರಿಂದ ಆರಂಭವಾಗಲಿರುವ ಸಂಸ ತ್‌ನ ಮಳೆಗಾಲದ ಅಧಿವೇಶನದಲ್ಲಿ ಅವರು ಪ್ರಸ್ತಾಪಿಸಲಿದ್ದಾರೆ.
ಕೇಂದ್ರ ಸರ್ಕಾರದ ಆರ್ಥಿಕ ವಿಷಯಗಳು, ಗ್ರಾಮೀಣಾಭಿ ವೃದ್ಧಿ, ಪಂಚಾಯತ್‌ರಾಜ್, ನರೇಗಾ, ಯೋಜನೆ ಸೇರಿದಂತೆ ಹಲವು ವಿಷಯ ಕುರಿತು ಸಾರ್ವಜ ನಿಕರು ತಮ್ಮ ಪ್ರಶ್ನೆಗಳು, ದೂರು ಗಳನ್ನು ರಾಜೀವ್ ಚಂದ್ರಶೇಖರ್ ಅವರ ಇಮೇಲ್, ಸಾಮಾಜಿಕ ಜಾಲ ತಾಣ, ಇಲ್ಲವೇ ಪತ್ರದ ಮೂಲಕ ಕಳುಹಿಸಬಹುದಾಗಿದೆ.
ವಿಳಾಸ: ರಾಜೀವ್ ಚಂದ್ರ ಶೇಖರ್ ಅವರ ಕಚೇರಿ, 11ನೇ ಮಹಡಿ, ದೊಡ್ಡ ಗೋಪುರ, ಸರ್‌ಎಂ. ವಿಶ್ವೇಶ್ವರಯ್ಯ ಕೇಂದ್ರ, ಡಾ.ಅಂಬೇಡ್ಕರ್ ವೀದಿ. ಇ- ಮೇಲ್: rc@rajeev.in ಫೇಸ್‌ಬುಕ್: https://www. facebook.com/rajeevChandrasekharMP
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.