ADVERTISEMENT

‘ಯೋಗಾಭ್ಯಾಸದಿಂದ ಒತ್ತಡ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:37 IST
Last Updated 14 ಜನವರಿ 2018, 19:37 IST

ಬೆಂಗಳೂರು: ಅನಿಯಮಿತ ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡವೇ ಮಧುಮೇಹ ಸಮಸ್ಯೆಗೆ ಕಾರಣ. ಒತ್ತಡವಿಲ್ಲದ ಜೀವನಕ್ಕಾಗಿ ಯೋಗಾಭ್ಯಾಸ ಬಹಳ ಮುಖ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ವಿ.ಸುದೇಶ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಾಗಿ ಆಯೋಜಿಸಿದ್ದ ‘ಮಧುಮೇಹ ನಿಯಂತ್ರಣ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತವು ಮಧುಮೇಹದ ರಾಜಧಾನಿಯಾಗಿದೆ. ಉತ್ತಮ ಜೀವನ ಶೈಲಿಯಿಂದ ಮಾತ್ರ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು ಎಂದರು.

ADVERTISEMENT

ಯೋಗ ಕೇಂದ್ರದ ನಿರ್ದೇಶಕ ಡಾ.ವಿ.ನಾಗೇಶ್ ಬೆಟ್ಟಕೋಟೆ, ‘ಮಧುಮೇಹ ನಿಯಂತ್ರಿಸಲು ಯೋಗವು ಸಹಕಾರಿ. ವ್ಯಾಯಾಮ, ಯೋಗ ಮತ್ತು ನಿಯಮಿತ ಆಹಾರ ಸೇವನೆಯಿಂದ ಮನುಷ್ಯ ರೋಗಮುಕ್ತನಾಗುತ್ತಾನೆ’ ಎಂದು ಹೇಳಿದರು.

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಅರವಿಂದ ಮಧುಮೇಹ ಕೇಂದ್ರದ ಮುಖ್ಯಸ್ಥ ಡಾ.ಅರವಿಂದ ಜಗದೀಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.