ADVERTISEMENT

ಕೇತೋಹಳ್ಳಿ ಶಾಲೆಗೆ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:20 IST
Last Updated 9 ಫೆಬ್ರುವರಿ 2018, 20:20 IST

ಬೆಂಗಳೂರು: ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ವತಿಯಿಂದ ಮಾರ್ಚ್‌ 8 ಹಾಗೂ 9ರಂದು ನಡೆಯಲಿರುವ ‘ನಂಬಿಕೆ ಮತ್ತು ಅದರಾಚೆ’ ಕುರಿತ ಜಾಗತಿಕ ಸಮಾವೇಶದ ಲಾಂಛನವನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ನಗರದ ಭಾರತೀಯ ವಿದ್ಯಾಭವನದಲ್ಲಿ 8ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ನಡೆಯಲಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಪ್ರಾಸ್ತಾವಿಕ ಭಾಷಣ ಮಾಡುತ್ತಾರೆ. ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ರಾಧಾಕೃಷ್ಣನ್‌ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ತಿಳಿಸಿದರು.  

‘ವೈದ್ಯಕೀಯ ವಿಜ್ಞಾನದಲ್ಲಿ ನಂಬಿಕೆ ಮತ್ತು ವಿಶ್ವಾಸಗಳು, ಅಲೌಕಿಕ ಚಿಕಿತ್ಸಾ ಪದ್ಧತಿ, ಯೋಗ, ವೇದ ಮಂತ್ರಗಳ ಪ್ರಭಾವ, ವಾಸ್ತು, ಸಂಖ್ಯಾಶಾಸ್ತ್ರ, ಧಾರ್ಮಿಕ ಮತ್ತು ಜ್ಞಾನ ಕ್ಷೇತ್ರಗಳ ನಂಬಿಕೆಗಳ ಕುರಿತು ವಿಚಾರ ಮಂಥನ ನಡೆಯುತ್ತದೆ’ ಎಂದರು.  ‘50 ವರ್ಷಗಳಲ್ಲಿ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಗಳನ್ನು ಕಂಡಿದ್ದೇನೆ. ಮೂಲ ತತ್ವಗಳಿಗೆ ಕಿಲುಬು ಬೆಳೆಯುತ್ತಿದೆ. ನಂಬಿಕೆಯನ್ನು ಸರಿಯಾಗಿ ತಿಳಿಯಬೇಕು. ಆಗ ಮಾತ್ರ ಅದರ ಸತ್ಯ ಏನೆಂದು ತಿಳಿಯುತ್ತದೆ’ ಎಂದು ಹೆಗ್ಗಡೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.