ADVERTISEMENT

ಕೆ.ಎಸ್.ಲತಾಕುಮಾರಿ ಅರ್ಜಿ ಮಾನ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:27 IST
Last Updated 9 ಫೆಬ್ರುವರಿ 2018, 20:27 IST

ಬೆಂಗಳೂರು: ಕೆಎಎಸ್‌ ಅಧಿಕಾರಿಯಾದ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಕೆ.ಎಸ್‌.ಲತಾಕುಮಾರಿ ಅವರನ್ನು ಐಎಎಸ್‌ ಶ್ರೇಣಿಗೆ ಬಡ್ತಿ ನೀಡುವ ಶಿಫಾರಸು ಪಟ್ಟಿಗೆ ಪರಿಗಣಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಕೆ.ಎಸ್.ಲತಾಕುಮಾರಿ ಸಲ್ಲಿಸಿದ್ದ ರಿಟ್ ಅರ್ಜಿ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದೆ.

‘1998ನೇ ಬ್ಯಾಚ್‌ಗೆ ಸೇರಿದ 34 ಕೆಎಎಸ್‌ ಅಧಿಕಾರಿಗಳನ್ನು, ಐಎಎಸ್‌ ಶ್ರೇಣಿಗೆ ಬಡ್ತಿ ನೀಡಲು ಶಿಫಾರಸು ಮಾಡಲಾದ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಡಲಾಗಿದೆ. ನನ್ನ ಹೆಸರಿನ ಬದಲಿಗೆ ಎಂ.ವಿ.ಚಂದ್ರಕಾಂತ ಹೆಸರನ್ನು ಸೇರಿಸಬೇಕೆಂಬ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಲತಾಕುಮಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ADVERTISEMENT

‘ಲತಾ ಕುಮಾರಿ ಅವರ ಆಕ್ಷೇಪ ನಿಸ್ಸಂಶಯವಾಗಿಯೂ ಸರಿಯಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಚಂದ್ರಕಾಂತ ಹಾಗೂ ಮತ್ತೊಬ್ಬ ಅಧಿಕಾರಿ ಸಂಗಪ್ಪ ಅವರ ನಡುವಿನ ಜಾತಿ ಪ್ರಮಾಣ ಪತ್ರದ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾದ ತಕರಾರಿನಲ್ಲಿ ಲತಾ ಕುಮಾರಿ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.