ADVERTISEMENT

ನಾಲ್ವರು ಸಾಧಕರಿಗೆ ‘ಆಶ್ವಾಸನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 14:11 IST
Last Updated 10 ಅಕ್ಟೋಬರ್ 2024, 14:11 IST
ರಂಗನಗೌಡ ಕೆ. ನಾಡಿಗೇರ
ರಂಗನಗೌಡ ಕೆ. ನಾಡಿಗೇರ   

ಬೆಂಗಳೂರು: ನಗರದ ಆಶ್ವಾಸನ ಫೌಂಡೇಷನ್‌ ನೀಡುವ 2024ನೇ ಸಾಲಿನ ‘ಆಶ್ವಾಸನ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಸಂಗೀತ ಸಂಘಟಕ ರಂಗನಗೌಡ ಕೆ. ನಾಡಿಗೇರ (ಕುಂದಗೋಳ), ಯಕ್ಷಗಾನ ಕಲಾವಿದ ಶ್ರೀಧರ ಷಡಕ್ಷರಿ (ಕುಮಟಾದ ಕತಗಾಲ್), ತಬಲಾ ವಾದಕ ಎಂ. ನಾಗೇಶ (ಬೆಂಗಳೂರು) ಹಾಗೂ ಮೂರ್ತಿಗಳಿಗೆ ಹೊಯ್ಸಳ ಶೈಲಿಯಲ್ಲಿ ಹಿತ್ತಾಳೆಯ ಎರಕ ಹೊಯ್ದು ಹೊನ್ನ ಹೊಳಪು ನೀಡುತ್ತಿದ್ದ ಪಿ. ಕೃಷ್ಣಮೂರ್ತಿ (ಬ್ಯಾಡರಹಳ್ಳಿ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹15 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. 

‘ಸಪ್ತಕ’ ಸಂಸ್ಥೆಯ ಮುಖ್ಯಸ್ಥ ಜಿ.ಎಸ್. ಹೆಗಡೆ ಅವರ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಅ.19ರಂದು ಬೆಳಿಗ್ಗೆ 9.45ಕ್ಕೆ ಲ್ಯಾವೆಲ್ಲೆ ರಸ್ತೆಯಲ್ಲಿರುವ ರೋಟರಿ ಕ್ಲಬ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‌ನ ವ್ಯವಸ್ಥಾಪಕ ಟ್ರಸ್ಟಿ ಮಾಳವಿಕಾ ಉಭಯಕರ್ ಬಿಜೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಶ್ರೀಧರ ಷಡಕ್ಷರಿ
ಪಿ. ಕೃಷ್ಣಮೂರ್ತಿ
ಎಂ. ನಾಗೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.