ADVERTISEMENT

ಬಾವಲಿಗಳ ಛಾಯಾಚಿತ್ರ, ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 19:35 IST
Last Updated 7 ಸೆಪ್ಟೆಂಬರ್ 2018, 19:35 IST
ಬಾವಲಿ
ಬಾವಲಿ   

ಬೆಂಗಳೂರು: ಪರಿಸರ–ನಿಸರ್ಗ ಸಂರಕ್ಷಣಾ ಸಂಸ್ಥೆ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಜನ್ಮದಿನದ ಅಂಗವಾಗಿ ‘ತೇಜಸ್ವಿ ಜೀವಲೋಕ: 81 ಬಾವಲಿಗಳ ನಿಗೂಢಲೋಕ’ ಎಂಬ ಛಾಯಾಚಿತ್ರ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಕರ್ನಾ ಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದೆ.

‘ಪ್ರಜಾವಾಣಿ’ ಸಹ ಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಶನಿವಾರ (ಸೆ.8) ಬೆಳಿಗ್ಗೆ 10 ರಿಂದ ಸಂಜೆ 7ರವರೆಗೂ ಕಾರ್ಯಕ್ರಮ ನಡೆಯಲಿದೆ. ಅಭಿ ವೃದ್ಧಿ ನೆಪದಲ್ಲಿ ಇಡೀ ಜೀವ ಸಂಕುಲ ನಾಶವಾಗುತ್ತಿರುವ ಬಗ್ಗೆ ತಜ್ಞ ರೊಡನೆ ಸಂವಾದ ನಡೆಯಲಿದೆ. ಬಾವಲಿ ಗಳ ಕುರಿತಾದ ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಸಚಿವೆ ಜಯಮಾಲಾ ಉದ್ಘಾಟಿಸಲಿದ್ದು, ಬೆಂಗಳೂರು ವಿ.ವಿದ್ಯಾಲಯ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌, ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಡಾ.ಜಾಫೆಟ್‌, ಅಂಡಮಾನ್‌–ನಿಕೋಬಾರ್‌ ದ್ವೀಪ ಬಾವಲಿಗಳ ಸಂಶೋಧಕಿ ಡಾ.ಬಂದನ ಆಲ್‌ ಆರೋರಾ ಉಪಸ್ಥಿತರಿರಲಿದ್ದಾರೆ.

ADVERTISEMENT

ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪರಿಸರ ಸಂಸ್ಥೆಯ ಈಶ್ವರ್‌ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.