ADVERTISEMENT

ಬೆಂಗಳೂರು: ಔಷಧ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 22:12 IST
Last Updated 1 ಮೇ 2021, 22:12 IST
ಬೇಳೂರು ಸಹಾಯಹಸ್ತ ಟ್ರಸ್ಟ್‌ ವತಿಯಿಂದ ಪೌರಕಾರ್ಮಿಕರಿಗೆ ಔಷಧ ಕಿಟ್ ವಿತರಿಸಲಾಯಿತು.
ಬೇಳೂರು ಸಹಾಯಹಸ್ತ ಟ್ರಸ್ಟ್‌ ವತಿಯಿಂದ ಪೌರಕಾರ್ಮಿಕರಿಗೆ ಔಷಧ ಕಿಟ್ ವಿತರಿಸಲಾಯಿತು.   

ಬೆಂಗಳೂರು: ಕಾರ್ಮಿಕರ ದಿನದ ಅಂಗವಾಗಿ ಬೇಳೂರು ಸಹಾಯಹಸ್ತ ಟ್ರಸ್ಟ್‌ ವತಿಯಿಂದ ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಹಾಗೂಪೌರಕಾರ್ಮಿಕರಿಗೆ ಔಷಧ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

‘ಮನೆಯಲ್ಲೇ ಚಿಕಿತ್ಸೆ ಪಡೆಯುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಔಷಧ ಕಿಟ್ ವಿತರಿಸಲಾಗುವುದು. ಇದಕ್ಕಾಗಿ ಸಹಾಯವಾಣಿ ಆರಂಭಿಸಿದ್ದೇವೆ’ ಎಂದುಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

‘ಸಹಾಯವಾಣಿಗೆ ಕರೆ ಮಾಡಿದ ಒಂದು ಗಂಟೆಯೊಳಗೆ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೊರೊನಾ ಪಾಸಿಟಿವ್ ಇರುವವರಿಗೆ ಮನೆ ಬಾಗಿಲಿಗೆ ಔಷಧ ಕಿಟ್ ವಿತರಿಸಲಾಗುವುದು. ಕಿಟ್‌ನಲ್ಲಿ 15 ದಿನಗಳಿಗೆ ಆಗುವಷ್ಟು ಔಷಧಗಳು ಇರಲಿವೆ’ ಎಂದೂ ಹೇಳಿದರು.

ADVERTISEMENT

ಸಹಾಯವಾಣಿ ಸಂಖ್ಯೆ: 6360234388

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.