ADVERTISEMENT

ವೈದ್ಯಕೀಯ ತ್ಯಾಜ್ಯ ಸುರಿದಿದ್ದು ನಿಜ: ಕ್ಷಮಾಪಣಾ ಪತ್ರ ಬರೆದ ಕೇರಳ

ಕ್ಷಮಾಪಣಾ ಪತ್ರ ಬರೆದ ಕೇರಳದ ಮಾಲಿನ್ಯ ನಿಯಂತ್ರಣ ಮಂಡಳಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:14 IST
Last Updated 26 ಫೆಬ್ರುವರಿ 2020, 19:14 IST
ವೈದ್ಯಕೀಯ ತ್ಯಾಜ್ಯ
ವೈದ್ಯಕೀಯ ತ್ಯಾಜ್ಯ   

ಬೆಂಗಳೂರು:ಜೈವಿಕ ವೈದ್ಯಕೀಯ ತ್ಯಾಜ್ಯ ಮತ್ತು ಮಿಶ್ರ ಘನತ್ಯಾಜ್ಯವನ್ನು ಕಾನೂನುಬಾಹಿರವಾಗಿ ಕೇರಳದ ಜನರು ರಾಜ್ಯದ ಗಡಿಯಲ್ಲಿ ಎಸೆದಿರುವುದನ್ನು ಅಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಕೊಂಡಿದ್ದು, ಈ ಬಗ್ಗೆಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಕ್ಷಮಾಪಣಾ ಪತ್ರ ಬರೆದಿದೆ.

ನಂಜನಗೂಡಿನ ಬಳಿ ಮಿಶ್ರ ತ್ಯಾಜ್ಯವನ್ನು ಎಸೆದ ಬಗ್ಗೆ ಪುರಾವೆ ಹಾಗೂ ತಾಜ್ಯದ ಮಾದರಿಗಳ ಎಫ್‌ಐ
ಆರ್ ವರದಿ ಮತ್ತು ಪ್ರಯೋಗಾಲಯದ ವಿಶ್ಲೇಷಣೆ ವರದಿಯನ್ನು ಕೆಎಸ್‌ಪಿಸಿಬಿ ಕೇರಳದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿತ್ತು. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ, ಸರಣಿ ಪತ್ರಗಳನ್ನು ಬರೆದಿತ್ತು.ಆದರೆ, ಈ ಬಗ್ಗೆ ಮೌನಕ್ಕೆ ಶರಣಾಗಿದ್ದ ಅಲ್ಲಿನ ಮಂಡಳಿಯು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಫೆ.22ರಂದು ಅಲ್ಲಿನ ಮಂಡಳಿಯ ಸದಸ್ಯ ಕಾರ್ಯದರ್ಶಿ ಈ ಬಗ್ಗೆ ಪತ್ರ ಕಳುಹಿಸಿದ್ದು, ತ್ಯಾಜ್ಯ ಎಸೆದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.ವೈದ್ಯಕೀಯ ತ್ಯಾಜ್ಯವನ್ನು ನೆರೆಯ ರಾಜ್ಯಗಳಿಗೆ ಸಾಗಿಸಿ, ಸುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಮಂಡಳಿಯು ಪತ್ರದಲ್ಲಿ ಭರವಸೆ ನೀಡಿದೆ.

ADVERTISEMENT

ಈ ಘಟನೆಗೆ ಸಂಬಂಧಿಸಿದಂತೆಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ದಕ್ಷಿಣ)‍ಪ್ರಾದೇಶಿಕ ನಿರ್ದೇಶಕರು ಕೇರಳದ ಮಂಡಳಿಯಿಂದ ಮಾಹಿತಿ ಕೋರಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಈ ಸಮಸ್ಯೆ ಪರಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ಕೇರಳದ ಮಂಡಳಿಯು ಕಾಲಾವಕಾಶ ಕೇಳಿದ್ದು, ತನ್ನ ಇಲಾಖೆಗಳಿಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಘಟಿಸದಂತೆ ಎಚ್ಚರ ವಹಿಸಲು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.