ADVERTISEMENT

ಸಿಸಿಬಿ ದಾಳಿ: ₹ 30 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:52 IST
Last Updated 14 ಸೆಪ್ಟೆಂಬರ್ 2021, 19:52 IST
ಆರೋಪಿಗಳಿಂದ ಜಪ್ತಿ ಮಾಡಲಾದ ಎಕ್ಸೈಟೆಸ್ಸಿ ಮಾತ್ರೆಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ಎಕ್ಸೈಟೆಸ್ಸಿ ಮಾತ್ರೆಗಳು   

ಬೆಂಗಳೂರು: ನಗರದಲ್ಲಿ ವ್ಯವಸ್ಥಿತ ಜಾಲ ರೂಪಿಸಿ ಕೊಂಡು ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ನಿವಾಸಿ ಯಾದ ಆರೋಪಿ, ನೈಜೀರಿಯಾದ ಇಬ್ಬರು ಪ್ರಜೆಗಳ ಜೊತೆ ಸೇರಿ ಡ್ರಗ್ಸ್ ದಂಧೆ ನಡೆಸು ತ್ತಿದ್ದ. ಇದೀಗ ಮೂವರನ್ನು ಬಂಧಿಸ ಲಾಗಿದೆ. ಅವರಿಂದ ₹ 30 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಕಂಪನಿಗಳ ಉದ್ಯೋಗಿಗಳಿಗೆ ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. ಕೊಡಿಗೇಹಳ್ಳಿ ಬಳಿ ಸೋಮವಾರ ಕಾಣಿಸಿಕೊಂಡಿದ್ದ ಆರೋಪಿಗಳು, ಡ್ರಗ್ಸ್ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ನಡೆಸಿ ಅವರನ್ನು ಸೆರೆಹಿಡಿಯಲಾಯಿತು’ ಎಂದು ತಿಳಿಸಿದರು.

ADVERTISEMENT

‘210 ಗ್ರಾಂ ತೂಕದ 500 ಎಕ್ಸೈಟೆಸ್ಸಿ ಮಾತ್ರೆಗಳು ಹಾಗೂ ಆರು ಮೊಬೈಲ್‌ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಎನ್‌ಡಿಪಿಎಸ್ ಕಾಯ್ದೆಯಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.