ADVERTISEMENT

ಫಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 13:55 IST
Last Updated 8 ಡಿಸೆಂಬರ್ 2019, 13:55 IST
ಚಿತ್ರ1: ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ, 2: ಪುಟ್ಟ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮ, ಚಿತ್ರ 3: ಕಾರ್ನಿವಾಲ್ ನೃತ್ಯ
ಚಿತ್ರ1: ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ, 2: ಪುಟ್ಟ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮ, ಚಿತ್ರ 3: ಕಾರ್ನಿವಾಲ್ ನೃತ್ಯ   

ಮಹದೇವಪುರದ ಫಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ಕ್ರಿಸ್‌ಮಸ್‌ ಹಬ್ಬದ ವಿಶೇಷವಾಗಿ ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನ್ನು ಅನಾವರಣಗೊಳಿಸಲಾಗಿದೆ.

ಈ ಟ್ರೀ ವಿಶೇಷತೆಯೆಂದರೆ ಇದು ಬರೋಬ್ಬರಿ 75 ಅಡಿ ಎತ್ತರವಿದೆ. ಇದರ ಅಲಂಕಾರಕ್ಕಾಗಿ 50 ಸಾವಿರಕ್ಕೂ ಹೆಚ್ಚು ಫ್ಲಿಕರಿಂಗ್ ಲೈಟ್‌ಗಳನ್ನು ಬಳಸಲಾಗಿದೆ. ಇದರ ಸಮೀಪ ಅತ್ಯಾಕರ್ಷಕ ಇನ್‍ಸ್ಟಾಲೇಷನ್‍ಗಳು, ಫೈಬರ್‌ಗ್ಲಾಸ್‌ಗಳಿಂದ ರೂಪಿಸಿರುವ ಆಳೆತ್ತರದ ಸೆಲೆಬ್ರೇಟರಿ
ಪ್ರತಿಮೆಗಳು ಆಕರ್ಷಕವಾಗಿವೆ. ಇವುಗಳನ್ನು ಕಲಾವಿದ ಮನೋಲೋ ರುಬಿಯೋ ಅವರು ರೂಪಿಸಿದ್ದಾರೆ.

ಮಾಲ್‌ನಲ್ಲಿ ವರ್ಲ್ಡ್‌ ಆಫ್‌ ಕ್ರಿಸ್‌ಮಸ್‌ ಉತ್ಸವ ನಡೆಯುತ್ತಿದ್ದು, ಯೂರೋಪಿಯನ್ ಕ್ರಿಸ್‌ಮಸ್‌ ಲೋಕವೇ ಇಲ್ಲಿದೆ. ಇಲ್ಲಿ ಕ್ರಿಸ್‌ಮಸ್‌ ಟ್ರೀ, ಸಾಂತಾ ಕ್ಲಾಸ್ ಆಟಿಕೆ, ಕ್ರಿಸ್ಮಸ್ ಬಾಲ್‍ಗಳು, ಕರಕುಶಲ ಅಲಂಕಾರಿಕ ಸಾಮಗ್ರಿ, ಸ್ಟಾಕಿಂಗ್ಸ್, ಗೃಹಾಲಂಕಾರದ ಲೈಟಿಂಗ್ಸ್ ಮತ್ತು ಆಟಿಕೆಗಳು ಸೇರಿದಂತೆ ಹಲವು ಬಗೆಯ ವಸ್ತುಗಳು ಲಭ್ಯ.

ADVERTISEMENT

ಫಿನಿಕ್ಸ್ ಮಾರ್ಕೆಟ್‍ಸಿಟಿಗೆ ಬರುವ ಪ್ರತಿಯೊಬ್ಬರನ್ನೂ ಸಾಂತಾ ಸ್ವಾಗತಿಸಲಿದ್ದಾನೆ. ಪುಟ್ಟ ಮಕ್ಕಳಿಗೆ ಉಡುಗೊರೆಗಳನ್ನು ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾನೆ. ಇದಲ್ಲದೇ ಕರೋಲ್ ಗಾಯನ, ಜುಗ್ಲರ್ಸ್, ಅಂತರರಾಷ್ಟ್ರೀಯ ಕಾರ್ನಿವಾಲ್ ನೃತ್ಯ, ಡಿಜೆ ಸೇರಿದಂತೆ ನಾನಾ ಬಗೆಯ ಮನೋರಂಜನಾ ಕಾರ್ಯಕ್ರಮಗಳೂ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.