ADVERTISEMENT

ನಮ್ಮ ಮೆಟ್ರೊ 2ನೇ ಹಂತದ ಕಾಮಗಾರಿ ಜಾಗದಲ್ಲಿ 40 ಅಡಿ ಎತ್ತರದಿಂದ ಬಿದ್ದ ಕ್ರೇನ್!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 17:52 IST
Last Updated 24 ಅಕ್ಟೋಬರ್ 2021, 17:52 IST
ನಗರದ ಬಿಟಿಎಂ ಬಡಾವಣೆಯ ಉಡುಪಿ ಗಾರ್ಡನ್ ಸಿಗ್ನಲ್ ಬಳಿ ನಡೆಯುತ್ತಿರುವ ’ನಮ್ಮ ಮೆಟ್ರೊ’ 2ನೇ ಹಂತದ ಕಾಮಗಾರಿ ಜಾಗದಲ್ಲಿ ಭಾನುವಾರ ಬೃಹತ್ ಗಾತ್ರದ ಕ್ರೇನ್ 40 ಅಡಿ ಎತ್ತರದಿಂದ ಕಳಚಿ ಬಿದ್ದಿತು
ನಗರದ ಬಿಟಿಎಂ ಬಡಾವಣೆಯ ಉಡುಪಿ ಗಾರ್ಡನ್ ಸಿಗ್ನಲ್ ಬಳಿ ನಡೆಯುತ್ತಿರುವ ’ನಮ್ಮ ಮೆಟ್ರೊ’ 2ನೇ ಹಂತದ ಕಾಮಗಾರಿ ಜಾಗದಲ್ಲಿ ಭಾನುವಾರ ಬೃಹತ್ ಗಾತ್ರದ ಕ್ರೇನ್ 40 ಅಡಿ ಎತ್ತರದಿಂದ ಕಳಚಿ ಬಿದ್ದಿತು   

ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಬೃಹತ್ ಗಾತ್ರದ ಕ್ರೇನ್ 40 ಅಡಿ ಎತ್ತರದಿಂದ ಕಳಚಿ ಬಿದ್ದು ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

‘ಬಿಟಿಎಂ ಬಡಾವಣೆಯ ಎರಡನೇ ಹಂತದ ಉಡುಪಿ ಗಾರ್ಡನ್ ಸಿಗ್ನಲ್ ಬಳಿ ಕಾಮಗಾರಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾಮಗಾರಿ ನಿರತ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಳಿಗ್ಗೆ 6.15ರ ಸುಮಾರಿಗೆ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಮೆಟ್ರೊ ಸೆಗ್ಮೆಂಟ್ ಜೋಡಿಸುವ ಯಂತ್ರದ ಕ್ರೇನ್ ಬಳ
ಸುತ್ತಿದ್ದರು. ಇದೇ ಸಂದರ್ಭದಲ್ಲಿ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ ಕ್ರೇನ್ ಕಳಚಿ ಬಿದ್ದಿತ್ತು.’

ADVERTISEMENT

‘ನಸುಕಿನಿಂದಲೇ 100ಕ್ಕೂ ಹೆಚ್ಚು ಜನ ಕೆಲಸ ಆರಂಭಿಸಿದ್ದರು. ಕ್ರೇನ್ ಬಿದ್ದ ಜಾಗದಲ್ಲಿ ಯಾರೊಬ್ಬರೂ ಇರಲಿಲ್ಲ. ಹೀಗಾಗಿ, ಯಾವುದೇ ಅನಾಹುತ ಸಂಭವಿಸಿಲ್ಲ. ಆಕಸ್ಮಾತ್ ಯಾರಾದರೂ ಇದ್ದಿದ್ದರೆ, ಸಾವು ಸಂಭವಿಸುವ ಸಾಧ್ಯತೆ ಇತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿಯೇ ಕ್ರೇನ್‌ ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಬಿಎಂಆರ್‌ಸಿಎಲ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು. ಘಟನೆ ಬಗ್ಗೆ ದೂರು ಪಡೆದಿದ್ದು, ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ‘ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ. ಯಾರೊಬ್ಬರಿಗೂ ಗಾಯವಾಗಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.