ADVERTISEMENT

ನಗರಕ್ಕೆ ಬಂದ ಜಿಂಕೆ: ಗ್ರಾಮಸ್ಥರಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 18:00 IST
Last Updated 25 ಫೆಬ್ರುವರಿ 2021, 18:00 IST
ವರ್ತೂರಿನಲ್ಲಿ ಕಾಣಿಸಿಕೊಂಡಿದ್ದ ಜಿಂಕೆಯನ್ನು ಮರಳಿ ಅರಣ್ಯಕ್ಕೆ ಬಿಡುತ್ತಿರುವ ಸಿಬ್ಬಂದಿ
ವರ್ತೂರಿನಲ್ಲಿ ಕಾಣಿಸಿಕೊಂಡಿದ್ದ ಜಿಂಕೆಯನ್ನು ಮರಳಿ ಅರಣ್ಯಕ್ಕೆ ಬಿಡುತ್ತಿರುವ ಸಿಬ್ಬಂದಿ   

ವೈಟ್ ಪೀಲ್ಡ್: ಕಾಡಿನಿಂದಆಕಸ್ಮಿಕವಾಗಿ ದಾರಿತಪ್ಪಿ ನಾಡಿಗೆ ಬಂದ ಜಿಂಕೆಯನ್ನು ವರ್ತೂರು ಗ್ರಾಮಸ್ಥರು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ‌.

ವರ್ತೂರು ಸಮೀಪವಿರುವ ಗುಂಜೂರು ಪಾಳ್ಯ ಅರಣ್ಯ ಪ್ರದೇಶದಿಂದ ದಾರಿತಪ್ಪಿ ಬಂದು ಎರಡು ದಿನಗಳಿಂದ ವರ್ತೂರು ಗ್ರಾಮದ ತೋಟಗಳ ಬಳಿ ಸುತ್ತಾಡಿಕೊಂಡಿತ್ತು. ಇದನ್ನು ಕಂಡ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ತಿರುಗುತ್ತಿದ್ದವು. ಗುರುವಾರ ವರ್ತೂರಿನ ಈದ್ಗಾ ರಸ್ತೆಯಲ್ಲಿ ನಾಯಿಗಳು ಜಿಂಕೆಯನ್ನು ಓಡಿಸಿಕೊಂಡು ಬಂದಿದ್ದನ್ನು ಗಮನಿಸಿದ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿದ್ದಾರೆ.

‘ಗುಂಜೂರು ಪಾಳ್ಯದ ಅರಣ್ಯ ಪ್ರದೇಶದಲ್ಲಿ ಈ ಜಿಂಕೆಗಳಿವೆ. ಅವುಗಳಲ್ಲಿ ಒಂದು ನೀರು ಅಥವಾ ಆಹಾರ ಅರಸಿ ಅಲ್ಲಿಂದ ಹೊರಬಂದಿದೆ. ಜಿಂಕೆಗೆ ಸಣ್ಣ ಪ್ರಮಾಣದಲ್ಲಿ ತರಚಿದ ಗಾಯ ಬಿಟ್ಟರೆ ಯಾವುದೆ ರೀತಿಯ ಗಂಭೀರ ಗಾಯವಾಗಿಲ್ಲ. ತರಚಿದ್ದ ಗಾಯಕ್ಕೆ ಚಿಕಿತ್ಸೆ ನೀಡಿ, ಮರಳಿ ಅರಣ್ಯಕ್ಕೆ ಬಿಡಲಾಗಿದೆ’ ಎಂದು ವರ್ತೂರು ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.