ADVERTISEMENT

ರಕ್ತ ನೀಡಲು ಒಪ್ಪದಿದ್ದಕ್ಕೆ ಹಲ್ಲೆ; ನಾಲ್ವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 18:57 IST
Last Updated 10 ಜನವರಿ 2020, 18:57 IST

ಬೆಂಗಳೂರು: ರಕ್ತ ನೀಡಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಜೆ. ನೀತು (35) ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಆ ಸಂಬಂಧ ನಾಲ್ವರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಹಲ್ಲೆ ಸಂಬಂಧ ನೀತು ಅವರೇ ದೂರು ನೀಡಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳ ಪರಿಚಯಸ್ಥನೊಬ್ಬನನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಆತನಿಗೆ ರಕ್ತ ಬೇಕೆಂದು ವೈದ್ಯರು ಹೇಳಿದ್ದರು. ಪತಿಯ ಸ್ನೇಹಿತರೇ ಆದ ಆರೋಪಿಗಳು ನೀತು ಅವರ ಮನೆಗೆ ಜ. 8ರಂದು ಹೋಗಿ ರಕ್ತ ನೀಡಲು ಆಸ್ಪತ್ರೆಗೆ ಬರುವಂತೆ ಒತ್ತಾಯಿಸಿದ್ದರು.’

ADVERTISEMENT

‘ರಕ್ತ ನೀಡಲು ನೀತು ಒಪ್ಪಿರಲಿಲ್ಲ. ಸಿಟ್ಟಾದ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಿದ್ದರು. ಮನೆಯ ಪೀಠೋಪಕರಣಗಳನ್ನೂ ಒಡೆದು ಹಾಕಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.