ADVERTISEMENT

‘ಡಾ. ಅನುಪಮಾ ನಿರಂಜನ’ ಪ್ರಶಸ್ತಿಗೆ ನಿರ್ಮಲಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2023, 21:10 IST
Last Updated 8 ಮೇ 2023, 21:10 IST
ನಿರ್ಮಲಾ ಸಿ. ಎಲಿಗಾರ್
ನಿರ್ಮಲಾ ಸಿ. ಎಲಿಗಾರ್   

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ‘ಡಾ. ಅನುಪಮಾ ನಿರಂಜನ’ ಪ್ರಶಸ್ತಿಗೆ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿ, ಲೇಖಕಿ ನಿರ್ಮಲಾ ಎಲಿಗಾರ್‌ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಮೇ 17ರಂದು ಬೆಂಗಳೂರಿನ ಎನ್.ಆರ್. ಕಾಲೊನಿಯ ಬಿ.ಎಂ.ಶ್ರೀ ಕಲಾಭವನದಲ್ಲಿ ನಡೆಯುವ ಡಾ. ಅನುಪಮಾ ನಿರಂಜನ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಾ. ಅನುಪಮಾ ನಿರಂಜನ ಅವರ ಜನ್ಮದಿನದ ಅಂಗವಾಗಿ ನಡೆದ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ವಿದ್ಯಾ ಶಿರಹಟ್ಟಿ (ಪ್ರಥಮ ಸ್ಥಾನ, ₹2,500), ಆಶಾ ನಾಗರಾಜ್‌ (ದ್ವಿತೀಯ ಸ್ಥಾನ, ₹2,000) ಮತ್ತು ವಿಜಯಲಕ್ಷ್ಮಿ ನುಗ್ಗೇಹಳ್ಳಿ ಅವರಿಗೆ (ತೃತೀಯ ಸ್ಥಾನ, ₹1,500) ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.