ADVERTISEMENT

ಡ್ರಗ್ಸ್ ಮಾರುತ್ತಿದ್ದಾಗ ಕಾಲೇಜು ಬಳಿಯೇ ಸಿಕ್ಕಿಬಿದ್ದ ನೈಜೀರಿಯಾ ಪ್ರಜೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:28 IST
Last Updated 10 ಸೆಪ್ಟೆಂಬರ್ 2020, 19:28 IST

ಬೆಂಗಳೂರು: ಬನಶಂಕರಿ ಬಳಿಯ ಕಾಲೇಜೊಂದರ ಸಮೀಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾ ಪ್ರಜೆ ಇಫಿತು ಮಾಂಡೆ ಎಜೆ (35) ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಬ್ಯಾಗ್ ಇಟ್ಟುಕೊಂಡಿದ್ದ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಬನಶಂಕರಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬ್ಯಾಗ್‌ನಲ್ಲಿ 10 ಗ್ರಾಂ ಕೊಕೇನ್ ಪತ್ತೆಯಾಯಿತು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

ಗಾಂಜಾ ಪ್ರಕರಣದಲ್ಲಿ ಐವರ ಬಂಧನ: ತಲಘಟ್ಟಪುರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಬಳಿ ಗಾಂಜಾ ತಂದು ಮಾರಲು ಯತ್ನಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಆಂಧ್ರಪ್ರದೇಶದ ಥರಪಟ್ಲಾ ಮೌಲಿ (25), ದುರ್ಗಾ ಪ್ರಸಾದ್ (23), ಅಭಿಷೇಕ್ (23), ಉದಯ್ (24) ಹಾಗೂ ಒಡಿಶಾದ ಅಮನ್ ಪ್ರಧಾನ್ (23) ಬಂಧಿತರು. ಅವರಿಂದ ₹ 2.80 ಲಕ್ಷ ಮೌಲ್ಯದ 10 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.