ADVERTISEMENT

ವಿದೇಶಿ ಕೋರಿಯರ್‌ನಲ್ಲಿ ಡ್ರಗ್ಸ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:17 IST
Last Updated 31 ಅಕ್ಟೋಬರ್ 2020, 4:17 IST

ಬೆಂಗಳೂರು: ವಿದೇಶಗಳಿಂದ ಕೋರಿಯರ್ ಮೂಲಕ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಗರ ನಿವಾಸಿ ಸಾರ್ಥಕ್ ಆರ್ಯಾನ್‌ (31) ಮತ್ತು ಜೆ.ಸಿ. ನಗರದ ನಿವಾಸಿ ಕಾರ್ತಿಕ್ ಗೌಡ (25) ಬಂಧಿತ ಆರೋಪಿಗಳು, ಅವರಿಂದ 22 ಗ್ರಾಂ ಎಂಡಿಎಂಎ ಮಾತ್ರೆ, 5 ಗ್ರಾಂ ಎಲ್‌ಎಸ್‌ಡಿ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.

‘ಎಂಜಿನಿಯರಿಂಗ್ ಪದವೀಧರನಾದ ಸಾರ್ಥಕ್ ಆರ್ಯಾನ್, ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಹೆಸರಿಗೆ ಬೆಲ್ಜಿಯಂನಿಂದ ಕೋರಿಯರ್ ಬಂದಿದ್ದು, ಅದರಲ್ಲಿ ಡ್ರಗ್ಸ್ ಇರುವ ಬಗ್ಗೆ ಅಂಚೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.