ADVERTISEMENT

ವೈರಾಣು ಪತ್ತೆ ಪರೀಕ್ಷೆಗೆ ಉತ್ತೇಜನ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 20:32 IST
Last Updated 17 ಜುಲೈ 2022, 20:32 IST
ವೈರಾಣು ಅನುಕ್ರಮಣಿಕೆ ಪರೀಕ್ಷೆಯ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. ಡಾ. ರಮೇಶ್ ಹರಿಹರನ್, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ರಾಜೇಶ್ ಸುಂದರೇಶನ್ ಹಾಗೂ ಡಾ. ವಿಶಾಲ್ ರಾವ್ ಇದ್ದಾರೆ     – ಪ್ರಜಾವಾಣಿ ಚಿತ್ರ
ವೈರಾಣು ಅನುಕ್ರಮಣಿಕೆ ಪರೀಕ್ಷೆಯ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. ಡಾ. ರಮೇಶ್ ಹರಿಹರನ್, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ರಾಜೇಶ್ ಸುಂದರೇಶನ್ ಹಾಗೂ ಡಾ. ವಿಶಾಲ್ ರಾವ್ ಇದ್ದಾರೆ     – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಪತ್ತೆ ಹಚ್ಚಲು ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಉತ್ತೇಜನ ನೀಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸ್ಟ್ರಾಂಡ್ ಲೈಫ್ ಸೈನ್ಸ್ ಸಂಸ್ಥೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿವೈರಾಣು ಅನುಕ್ರಮಣಿಕೆ ಪರೀಕ್ಷೆಯ ವರದಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯು 2021ರಿಂದ ಜೂನ್ 2022ರವರೆಗೆ 12,800 ಮಾದರಿಗಳವೈರಾಣು ಅನುಕ್ರಮಣಿಕೆ ಪರೀಕ್ಷೆ ನಡೆಸಿದೆ. 100ಕ್ಕೂ ಅಧಿಕ ಪ್ರಕರಣಗಳಲ್ಲಿ ರೂಪಾಂತರಿಗಳು ಪತ್ತೆಯಾಗಿವೆ.

‘ವೈರಾಣುವಿನಹೊಸ ರೂಪಾಂತರಿ ಗುರುತಿಸಿದಲ್ಲಿ ರೋಗ ನಿಯಂತ್ರಣ ಸಾಧ್ಯವಾಗಲಿದೆ. ಆದ್ದರಿಂದವೈರಾಣು ಅನುಕ್ರಮಣಿಕೆ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು
ಡಾ.ಕೆ. ಸುಧಾಕರ್‌ ಹೇಳಿದರು.

ADVERTISEMENT

ವೈರಾಣು ಅನುಕ್ರಮಣಿಕೆ ಪರೀಕ್ಷೆ ಸಮಿತಿಯ ಸದಸ್ಯ ಹಾಗೂ ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ. ವಿಶಾಲ್ ರಾವ್, ‘ಈ ಹಿಂದೆ ಕೋವಿಡ್ ನಿಯಂತ್ರಣಕ್ಕೆವೈರಾಣು ಅನುಕ್ರಮಣಿಕೆ ಪರೀಕ್ಷೆ ನೆರವಾಯಿತು. ಈ ಪರೀಕ್ಷೆಗಳನ್ನು ಮುಂದುವರಿಸಿ, ರೋಗದ ತೀವ್ರತೆ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಡಾ. ರಮೇಶ್ ಹರಿಹರನ್, ‘ಕೋವಿಡ್ ಕಾಣಿಸಿಕೊಂಡಾಗ ವೈರಾಣು ಅನುಕ್ರಮಣಿಕೆ ಪರೀಕ್ಷೆಗಳನ್ನು ನಡೆಸಿ, ಡೆಲ್ಟಾ ರೂಪಾಂತರಿ ಪತ್ತೆ ಮಾಡಲಾಯಿತು. ಪರೀಕ್ಷೆಯ ವರದಿಗಳನ್ನು ಬಿಬಿಎಂಪಿಗೆ ಸಲ್ಲಿಸುವ ಮೂಲಕ ವೈರಾಣು ಹರಡುವಿಕೆ ತಡೆಗೆ ಶ್ರಮಿಸಲಾಯಿತು. ನಗರದಲ್ಲಿ ಓಮೈಕ್ರಾನ್ ಹರಡುವಿಕೆಯನ್ನೂ ಗುರುತಿಸಿ, ತೀವ್ರತೆಯ ಬಗ್ಗೆ ವಿಶ್ಲೇಷಿ
ಸಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.