ADVERTISEMENT

ಕಸದಿಂದ ವಿದ್ಯುತ್ ಉತ್ಪಾದನೆ: ಕನ್ನಹಳ್ಳಿ ಘಟಕಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:42 IST
Last Updated 14 ಆಗಸ್ಟ್ 2019, 19:42 IST

ಬೆಂಗಳೂರು: ನಗರದ ಹೊರವಲಯದಲ್ಲಿರುವ ಕನ್ನಹಳ್ಳಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ
ಘಟಕ ನಿರ್ಮಾಣ ಯೋಜನೆಗೆ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಬೆಲ್ಲಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರ ಭರ್ತಿಯಾಗುತ್ತಾ ಬಂದಿರುವುದರಿಂದಮುಂದಿನ 30 ವರ್ಷಕ್ಕೆಕನ್ನಹಳ್ಳಿಯಲ್ಲಿ ಕಸದ ಸಂಸ್ಕರಣೆಗೆ ಸರ್ಕಾರದ ಅನುಮೋದನೆ ದೊರೆತಿದೆ. ಇದರಿಂದ ಕಸದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ದೊರೆಯಲಿದೆ. ನೂತನ ಘಟಕದಲ್ಲಿಬಿಬಿಎಂಪಿಯು ಪ್ರತಿನಿತ್ಯ 500 ಟನ್ ಘನತ್ಯಾಜ್ಯವನ್ನು ಸಂಸ್ಕರಿಸಿ, 40 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದೆ.

‘ಪ್ರತಿ ನೂರು ಟನ್‌ ಕಸದಿಂದ 7ರಿಂದ 8 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಆಗಲಿದೆ. ಈ ಯೋಜನೆಗೆ ಪಾಲಿಕೆ ಹಣ ಹೂಡಿಕೆ ಮಾಡುವುದಿಲ್ಲ. ಬದಲಾಗಿ ಘಟಕದಲ್ಲಿ ಕಾರ್ಯಾಚರಣೆ ನಡೆಸುವ ಕಂಪನಿಯೇ ಎಲ್ಲವನ್ನೂ ನೋಡಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ 500 ಟನ್‌ ಕಸವನ್ನು ಪೂರೈಕೆ ಮಾಡಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಬಿಎಂಪಿ ಈ ಹಿಂದೆ ಮಾಡಿ ಕೊಂಡ ಒಪ್ಪಂದದ ಪ್ರಕಾರ ಕಸದಿಂದ ವಿದ್ಯುತ್ ಮಾಡುವ ಕಂಪನಿಗಳು ವಿದ್ಯುತ್‌ ಅನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಮಾರಾಟ ಮಾಡಬೇಕಾಗುತ್ತದೆ. ವಿದ್ಯುತ್ ಉತ್ಪಾದನೆ ಘಟಕದಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಸಂಪರ್ಕ ಇರಲಿದೆ.

ದೇಶದ ಇತರೆ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿರುವ ಸತೇರಾಮ್ ಎಂಟರ್‌ ಪ್ರೈಸಸ್ಕನ್ನಹಳ್ಳಿಯಲ್ಲಿ ಕೂಡಾ ಘಟಕ ಸ್ಥಾಪನೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.