ADVERTISEMENT

ಚಿಕ್ಕಬಾಣಾವರ ಗ್ರಾ.ಪಂ. ಲಕ್ಷೀನರಸಮ್ಮ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:13 IST
Last Updated 5 ಅಕ್ಟೋಬರ್ 2019, 19:13 IST
ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ನರಸಮ್ಮ ಅವರನ್ನು ಬಿ.ಜೆ.ಪಿ. ಮುಖಂಡ ಮುನಿರಾಜು ಅಭಿನಂದಿಸಿದರು
ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ನರಸಮ್ಮ ಅವರನ್ನು ಬಿ.ಜೆ.ಪಿ. ಮುಖಂಡ ಮುನಿರಾಜು ಅಭಿನಂದಿಸಿದರು   

ಹೆಸರಘಟ್ಟ:ಚಿಕ್ಕಬಾಣಾವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಲಕ್ಷ್ಮೀನರಸಮ್ಮ ಮತ್ತು ಉಪಾಧ್ಯಕ್ಷರಾಗಿ ಸಿ.ಜೆ. ಶ್ಯಾಮಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಮಲಾಕರ್‌ ಕಾರ್ಯನಿರ್ವಹಿಸಿದರು.

ಎರಡು ಹುದ್ದೆ–ಆರೋಪ:ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಕ್ಷ್ಮೀನರಸಮ್ಮ ಅವರು 2011ರಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2015ರಿಂದ ಪಂಚಾಯಿತಿ ಸದಸ್ಯರಾಗಿದ್ದಾರೆ. ಪಂಚಾಯಿತಿ ಸದಸ್ಯರಾದ ಕೂಡಲೇ ಆಶಾ ಕಾರ್ಯಕರ್ತೆಯ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅವರು ಎರಡು ಹುದ್ದೆಯಲ್ಲಿ ಮುಂದುವರಿಯುತ್ತಿದ್ದು, ಎರಡೂ ಹುದ್ದೆಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ’ ಎಂದು ಪಂಚಾಯಿತಿ ಸದಸ್ಯ ಚನ್ನಕೇಶವ ಮೂರ್ತಿ ಅವರು ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದರು.

ADVERTISEMENT

‘ಸರ್ಕಾರವು ಚುನಾವಣೆ ನಡೆಸುವಂತೆ ನನಗೆಆದೇಶ ನೀಡಿದೆ. ಅದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ’ ಎಂದು ಕಮಲಾಕರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.