ADVERTISEMENT

ಮೆಟ್ರೊ ಯೋಜನೆಗೆ ಮರ ಸ್ಥಳಾಂತರಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 19:38 IST
Last Updated 25 ಮಾರ್ಚ್ 2021, 19:38 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ನಾಗವಾರ–ಗೊಟ್ಟಿಗೆರೆ ಮೆಟ್ರೊ ಮಾರ್ಗಕ್ಕೆ ಮರಗಳನ್ನು ಕಡಿಯುವ ಮತ್ತು ಸ್ಥಳಾಂತರಿಸುವ ಮೊದಲು ಅಷ್ಟೇ ಸಂಖ್ಯೆಯ ಮರಗಳನ್ನು ಬೇರೆಡೆ ಬೆಳೆಸುವ ಬಗ್ಗೆ ಸಿದ್ಧಪಡಿಸಿರುವ ಯೋಜನೆ ಸಲ್ಲಿಸಬೇಕು’ ಎಂದು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಯೋಜನೆಗಾಗಿ 52 ಮರಗಳನ್ನು ಸ್ಥಳಾಂತರಿಸಲು ಮತ್ತು 39 ಮರಗಳನ್ನು ಕಡಿಯಲು ಅನುಮತಿ ನೀಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಅನುಮತಿ ಪಡೆಯದ 28 ಮರಗಳಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿತು.

ಸ್ಥಳಾಂತರಗೊಂಡ ಮರಗಳನ್ನು 36 ತಿಂಗಳು ನಿರ್ವಹಣೆ ಮಾಡಲಾಗುವುದು ಎಂಬ ಬಿಎಂಆರ್‌ಸಿಎಲ್‌ ಅಫಿಡವಿಟ್ ಅಂಗೀಕರಿಸಿದ ಪೀಠ, ‘ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯ ಎನಿಸಿದರೆ ಇನ್ನಷ್ಟು ದಿನ ನಿರ್ವಹಣೆ ಮಾಡಲು ಪತ್ರ ಬರೆಯಬೇಕು’ ಎಂದು ಪೀಠ ಹೇಳಿತು.

ADVERTISEMENT

ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರಯ ಟಿ. ದೇವರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.