ADVERTISEMENT

ಕಗ್ಗದಾಸಪುರ ಕೆರೆಯ ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:43 IST
Last Updated 22 ಮೇ 2019, 19:43 IST
ಕಗ್ಗದಾಸಪುರ ಕೆರೆ
ಕಗ್ಗದಾಸಪುರ ಕೆರೆ   

ಬೆಂಗಳೂರು:ಲೋಕಾಯುಕ್ತರ ಸೂಚನೆ ಅನುಸಾರ ಕಗ್ಗದಾಸಪುರ ಕೆರೆ ಪ್ರದೇಶದ ಒತ್ತುವರಿ ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ಸಮೀಕ್ಷೆ ಆರಂಭಿಸಿದೆ.

ಕಗ್ಗದಾಸಪುರ ಕೆರೆ 47 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯ ಒಟ್ಟು ಪ್ರದೇಶದಲ್ಲಿ 3 ಎಕರೆ 24 ಗುಂಟೆ ಜಾಗವನ್ನು ಖಾಸಗಿ ಮತ್ತು ಸಾರ್ವಜನಿಕ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಎಂದು ಕೆ.ಬಿ. ಕೋಳಿವಾಡ ನೇತೃತ್ವದ ಸದನ ಸಮಿತಿ ವರದಿ ತಿಳಿಸಿದೆ. ಹಾಗಾಗಿ ಲೋಕಾಯುಕ್ತರು ಸಮೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ.

‌ಕಂದಾಯ ಇಲಾಖೆಯು ಜತೆಗೆ ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯುನೈಟೆಡ್ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು ಬುಧವಾರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಸಮೀಕ್ಷೆ ಮಾಡಿದ್ದಾರೆ. ವಾರಾಂತ್ಯದ ವೇಳೆ ಸಮೀಕ್ಷೆ ಮುಕ್ತಾಯವಾಗಲಿದ್ದು, ತಜ್ಞರ ಸಮಿತಿಯು ವರದಿಯನ್ನು ಮೇ 28ರೊಳಗೆ ಲೋಕಾಯುಕ್ತರಿಗೆ ಸಲ್ಲಿಸಲಿದೆ.

ADVERTISEMENT

‘ಕಗ್ಗದಾಸಪುರ ಕೆರೆ ಕಸಗಳಿಂದ ಆವೃತವಾಗಿದೆ. ಕೆರೆ ಪ್ರದೇಶದ ಸೌಂದರ್ಯ ಹೆಚ್ಚಿಸಲು ಈಗಾಗಲೇ ₹8 ಕೋಟಿ ವ್ಯಯಿಸಿದೆ. ಆದರೆ, ಕೆರೆಯಲ್ಲಿ ಒಂದು ಹನಿ ನೀರಿಲ್ಲ. ಎಲ್ಲಾ ಹಣವನ್ನು ಕೆರೆಯ ಏರಿ ಮಾಡಲು ಬಳಕೆ ಮಾಡಲಾಗಿದೆ. ಕಗ್ಗದಾಸಪುರ ಕೆರೆಯನ್ನು ಇನ್ನೊಂದು ಬೆಳ್ಳಂದೂರು ಕೆರೆಯಾಗಿ ಮಾರ್ಪಡಲು ಅವಕಾಶ ಕೊಡುವುದಿಲ್ಲ ’ ಎಂದು ಯುನೈಟೆಡ್ ಬೆಂಗಳೂರು ಸಂಚಾಲಕ ಸುರೇಶ್ ಎನ್.ಆರ್. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.