ADVERTISEMENT

‘ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆಗೆ ರೂಪುರೇಷೆ’

ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಬಾಲಗ್ರಹದಿಂದ ಮುಕ್ತಿ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:29 IST
Last Updated 11 ಅಕ್ಟೋಬರ್ 2019, 20:29 IST
ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸಿ.ಟಿ. ರವಿ ‘ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಇದ್ದರು  –ಪ್ರಜಾವಾಣಿ ಚಿತ್ರ
ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸಿ.ಟಿ. ರವಿ ‘ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ 2008ರಲ್ಲಿಯೇ ಸಿಕ್ಕರೂ ಈವರೆಗೂ ಬಾಲಗ್ರಹಪೀಡಿತವಾಗಿತ್ತು. ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿದ್ದು,ನವೆಂಬರ್‌ ಅಂತ್ಯದೊಳಗೆ ಕನ್ನಡ ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆಗೆ ರೂಪು ರೇಷೆ ಸಿದ್ಧಪಡಿಸಲಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರಿಗೆ ‘ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನವನ್ನು ಹೊಂದಿದೆ.

‘ರಾಜ್ಯ ರಾಜ್ಯಗಳ ನಡುವೆ ಭಾಷೆಯ ವಿಚಾರವಾಗಿ ವಿವಾದ ನಡೆಯುವುದು ಸಾಮಾನ್ಯ. ಆದರೆ, ನಮ್ಮದೇ ಭಾಷೆಯ ಕೇಂದ್ರ ಸ್ಥಾಪನೆ ವಿಚಾರವಾಗಿ ಬೆಂಗ ಳೂರು ಮತ್ತು ಮೈಸೂರಿನ ನಡುವೆ ವಿವಾದ ಸೃಷ್ಟಿಯಾಗಿರುವುದು ವಿಪ ರ್ಯಾಸ. ಜಾಗದ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ADVERTISEMENT

ವಿಷ್ಣುವರ್ಧನ್ ಜಯಂತಿ ಆಚರಿಸು ವಂತೆ ಅಭಿಮಾನಿಗಳ ಮನವಿಗೆ ಪ್ರತಿ ಕ್ರಿಯಿಸಿದ ಸಚಿವರು, ‘ಸಾಧಕರನ್ನು ಪಟ್ಟಿ ಮಾಡಿದರೆ 365 ದಿನಗಳೂ ಸಾಲದು. ಈಗಾಗಲೇ ಐವರು ಸಾಧಕರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂಬ ಕಡತ ನನ್ನ ಬಳಿಗೆ ಬಂದಿದೆ. ನಾವು ಕನ್ನಡ ಕಟ್ಟುವ ಕೆಲಸ ದಲ್ಲಿ ನಿರತರಾಗಬೇಕೇ ಹೊರತು ಜಯಂತಿ ಆಚರಿಸುವುದರಲ್ಲಿ ಅಲ್ಲ’ ಎಂದರು.

‘ಅಭಿಮಾನಿಗಳು ಆಚರಿಸುವ ಜಯಂತಿಗೆ ವಿರೋಧವಿಲ್ಲ. ಆದರೆ, ಸರ್ಕಾರದ ವತಿಯಿಂದ ವಿಷ್ಣುವರ್ಧನ್ ಜಯಂತಿ ಆಚರಿಸುವುದಿಲ್ಲ. ಈಗಿರುವ ಜಯಂತಿಗಳ ಸಂಖ್ಯೆಯನ್ನೇ ಕಡಿತಗೊಳಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದೇನೆ. ವಿಷ್ಣುವರ್ಧನ್ ಅವರಿಗೆ ಮರಣೋತ್ತರ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ವಿಷ್ಣು ದುರಂತ ನಾಯಕ:ಪ್ರಶಸ್ತಿ ಪುರಸ್ಕೃತ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ‘ವಿಷ್ಣುವರ್ಧನ್‌ ಅವರು ಭಾರತೀಯ ಚಿತ್ರರಂಗದ ದುರಂತ ನಾಯಕರಾದರು. 9 ವರ್ಷವಾದರೂ ಅವರ ಸಮಾಧಿ ನಿರ್ಮಾಣವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಸಿನಿಮಾಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪರಭಾಷಿಗರ ಚಿತ್ರ ರಂಗ ಪ್ರತಿವರ್ಷ ನಮ್ಮ ರಾಜ್ಯದಿಂದ ₹2 ಸಾವಿರ ಕೋಟಿ ಹಣ ಸಂಗ್ರಹಿಸುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್‌ ದರ ನಿಗದಿಪಡಿಸಿ, ಜನರಿಂದ ವಸೂಲಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ನೆರೆ ಬಂದಾಗ ಪರಭಾಷೆಯ ನಟರು ನಮ್ಮ ಕಣ್ಣೀರನ್ನು ಒರೆಸಲು ಬರುವುದಿಲ್ಲ’ ಎಂದು ತಿಳಿಸಿದರು.

*
ಪುಟ್ಟಣ್ಣ ಕಣಗಾಲ್ ‘ನಾಗರ ಹಾವು’ ನಂತರ ವಿಷ್ಣು ಜತೆಗೆ ಇನ್ನೂ ಹಲವು ಚಿತ್ರ ಮಾಡಿದ್ದರೆ ಚೆನ್ನಾ ಗಿರುತ್ತಿತ್ತು. ಆದರೆ, ಅವರು ಏಕೆ ಮಾಡಲಿಲ್ಲ ಎಂಬುದು ನಿಗೂಢವಾಗಿದೆ.
-ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಚಲನಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.