ADVERTISEMENT

‘ಕನ್ನಡ ಲೇಖಕರು ನಾಡಿನಾದ್ಯಂತ ಇದ್ದಾರೆ’

ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ನಿಂದ ಪ್ರಶಸ್ತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:45 IST
Last Updated 27 ಜುಲೈ 2019, 19:45 IST
ಗಾಯಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಲೇಖಕ ವಿಷ್ಣು ನಾಯ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಗಾಯಕ ವೈ.ಕೆ.ಮುದ್ದುಕೃಷ್ಣ,ಟ್ರಸ್ಟ್‌ನ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಗಾಯಕಿ ನಾಗಚಂದ್ರಿಕಾ ಭಟ್ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕನ್ನಡದ ಲೇಖಕರು ಕೇವಲ ಧಾರವಾಡ, ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾತ್ರ ಇಲ್ಲ, ನಾಡಿನಾದ್ಯಂತ ಇದ್ದಾರೆ ಎನ್ನುವ ಅಂಶವನ್ನು ಟ್ರಸ್ಟ್‌ ಇಂದು ತೋರಿಸಿಕೊಟ್ಟದೆ’ ಎಂದು ಕವಿ ಎಚ್‌. ಎಸ್‌. ವೆಂಕಟೇಶಮೂರ್ತಿ ಶ್ಲಾಘಿಸಿದರು.

ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕೆ.ಎಸ್‌.ನ ಪ್ರಶಸ್ತಿ’ ಹಾಗೂ ‘ಕೆ.ಎಸ್‌.ನ ಕಾವ್ಯಗಾಯನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಕೆ.ಎಸ್‌.ನ ಕಾವ್ಯಗಾಯನ ಪ್ರಶಸ್ತಿ’ ಪುರಸ್ಕೃತ, ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಬಗ್ಗೆ ಮಾತನಾಡಿ, ‘ಭಾಷೆ ಬಗ್ಗೆ ಪ್ರೀತಿ ಇದ್ದವರಿಗೆ ಮಾತ್ರ ಕಾವ್ಯ ಇಷ್ಟವಾಗುತ್ತದೆ. ಅಂತೆಯೇ ಸುಬ್ಬಣ್ಣ ಸಹ. ಭಾಷೆಯ ಬಗೆಗೆ ಬಹಳ
ಕಾಳಜಿ ಇರುವವರು. ಆದ್ದರಿಂದಲೇ ಅವರ ಹಾಡುಗಾರಿಕೆ ಮನಸ್ಸಿಗೆ ತಟ್ಟುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕೆ.ಎಸ್‌.ನ ಪ್ರಶಸ್ತಿ’ ಪುರಸ್ಕೃತ, ಲೇಖಕ ವಿಷ್ಣು ನಾಯ್ಕ ಅವರ ಕುರಿತು ಮಾತನಾಡಿ, ‘ವಿಷ್ಣು ಅವರು ಅಕ್ಷರ ಲೋಕದ ಅಕ್ಕರೆಯ ಮನುಷ್ಯ.ಬಡವರ, ದೀನರ ಬಗ್ಗೆ ಅವರಿಗಿರುವ ಕಾಳಜಿ ಅಪಾರ. ಇದೇ ಅವರ ಬರಹಗಳಲ್ಲೂ ಕಾಣಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.