ADVERTISEMENT

ದೇಶದ ಹಿತ ಕಾಯಲು ಒಗ್ಗಟ್ಟಾಗಬೇಕು: ಶಾಸಕ ಎಸ್.ಆರ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:39 IST
Last Updated 26 ಜನವರಿ 2021, 19:39 IST
ಶಾಸಕ ಎಸ್.ಆರ್.ವಿಶ್ವನಾಥ್, ಧ್ವಜಾರೋಹಣ ನೆರವೇರಿಸಿದರು.ತಹಶೀಲ್ದಾರ್ ಕೆ.ನರಸಿಂಹಮೂತರ್ಿ ಇದ್ದರು.
ಶಾಸಕ ಎಸ್.ಆರ್.ವಿಶ್ವನಾಥ್, ಧ್ವಜಾರೋಹಣ ನೆರವೇರಿಸಿದರು.ತಹಶೀಲ್ದಾರ್ ಕೆ.ನರಸಿಂಹಮೂತರ್ಿ ಇದ್ದರು.   

ಯಲಹಂಕ: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಆಶ್ರಯದಲ್ಲಿ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಧ್ವಜಾರೋಹಣ ನೆರವೇರಿಸಿದರು.

‘ಸಾವಿರಾರು ವರ್ಷಗಳ ಇತಿಹಾಸ ವಿರುವ ಭಾರತದಲ್ಲಿ ಜನಿಸುವುದೇ ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ದೇಶದ ಹಿತ ಕಾಯುವ ವಿಚಾರ ಬಂದಾಗ ಜಾತಿ, ಧರ್ಮ, ಪಕ್ಷಭೇದ ಎಲ್ಲವನ್ನೂ ಮರೆತು ಸಂಘಟಿತರಾಗಬೇಕು’ ಎಂದು ವಿಶ್ವನಾಥ್‌ ಹೇಳಿದರು.
ಪೊಲೀಸ್, ಬ್ಯಾಂಡ್, ದೈಹಿಕ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿ ಗಳ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಕಿಶೋರ್ ಕುಮಾರ್, ಮುಖಂಡರಾದ ಎಂ.ಸತೀಶ್, ಎಂ.ಮುನಿರಾಜು, ಡಾ.ಶಶಿಕುಮಾರ್, ಎ.ಸಿ.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT