ಭಾರಿ ಮಳೆ
ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಯಿತು. ರಾತ್ರಿ ಸುಮಾರು 10.30ಕ್ಕೆ ಆರಂಭವಾದ ಮಳೆ ತದರಾತ್ರಿ ವರೆಗೂ ಮುಂದುವರಿಯಿತು. ಹಲವಾರು ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಕಸ್ತೂರಿನಗರದ ಬಳಿ ಮಳೆ ನೀರು ನಿಂತು ರಾಮಮೂರ್ತಿನಗರದ ಕಡೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಒಕಳಿಪುರ ಕೆಳಸೇತುವೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತ ಗೊಂಡಿತ್ತು. ರಿಚ್ಮಂಡ್ ರಸ್ತೆ, ಹಲಸೂರು, ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.
ಬೊಮ್ಮನಹಳ್ಳಿಯಲ್ಲಿ 4.9 ಸೆಂ.ಮೀ, ಕೋರಮಂಗಲ 41 ಸೆಂ.ಮೀ, ಬಿಟಿಎಂ ಲೇಔಟ್nನಲ್ಲಿ 2.7ಸೆಂ.ಮೀ, ಎಚ್ ಎಸ್ ಆರ್ ಲೇಔಟ್ ನಲ್ಲಿ 26 ಸೆಂ.ಮೀ, ಸಂಪಂಗಿರಾಮನಗರ, ಸಿಂಗಸಂದ್ರ, ಮಹದೇವಪುರ, ಪುಲಕೇಶಿ ನಗರ ,ದಯಾನಂದ ನಗರ, ಬಾಣಸವಾಡಿ, ವಿಶ್ವೇಶ್ವರ ಪುರ, ಹಂಪಿನಗರ , ಬೆಳ್ಳಂದೂರು , ಹೊರಮಾವು, ಕೊಟ್ಟೇಗೆಪಾಳ್ಯ, ಬಸವೇಶ್ವರನಗರ, ಜಕ್ಕೂರು , ಪಟ್ಟಾಭಿರಾಮ ನಗರ, ಕಾಟನ್‌ಪೇಟೆ, ವಿದ್ಯಾಪೀಠ, ಗರುಡಾಚಾರ್ ಪಾಳ್ಯ ಸುತ್ತಮುತ್ತ ಪ್ರದೇಶಗಳಲ್ಲಿ ತಲಾ 2ಸೆಂ.ಮೀಗೂ ಹೆಚ್ಚಿನ ಮಳೆಯಾಯಿತು.
ಹೆಬ್ಬಾಳ, ಯಲಹಂಕ, ವಿದ್ಯಾರಣ್ಯಪುರ, ಕಮ್ಮನಹಳ್ಳಿ, ರಾಮಮೂರ್ತಿ ನಗರ, ಮಾರತ್ ಹಳ್ಳಿ, ಹೂಡಿ. ಗರುಡಾಚಾರ್ಯ ಪಾಳ್ಯ,, ಎಚ್ ಎ ಎಲ್ ವಿಮಾನ ನಿಲ್ದಾಣ,, ಕೊತ್ತನೂರು, ರಾಜಾಜಿನಗರ, ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಸುತ್ತ ಮುತ್ತ ಪ್ರದೇಶಗಳಲ್ಲಿ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.