ADVERTISEMENT

ರೌಡಿ ಜೋಶ್ವಾ ಗಡಿಪಾರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:21 IST
Last Updated 27 ಸೆಪ್ಟೆಂಬರ್ 2021, 19:21 IST
ಜೋಶ್ವಾ
ಜೋಶ್ವಾ   

ಬೆಂಗಳೂರು: ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದ ರೌಡಿಶೀಟರ್‌ ಜೋಶ್ವಾ (29) ಎಂಬಾತನನ್ನು ಜೆ.ಬಿ.ನಗರ ಪೊಲೀಸರು ಒಂದು ವರ್ಷ ಗಡಿಪಾರು ಮಾಡಿದ್ದಾರೆ.

‘ಜೋಶ್ವಾ ಮೇಲೆ 6 ಗಂಭೀರ ಪ್ರಕರಣಗಳಿವೆ. ಈತನಿಂದ ಅನೇಕರಿಗೆ ಜೀವ ಬೆದರಿಕೆ ಇದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೂ ಹಾನಿಯುಂಟುಮಾಡುವ ಸಾಧ್ಯತೆ ಇದೆ. ಕಾನೂನಿನ ಭಯವಿಲ್ಲದೇ ಈತ ನಿರಂತರವಾಗಿ ಅಪರಾಧ ಚಟು ವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ನಗರದಿಂದ ಒಂದು ವರ್ಷ ಗಡಿ ಪಾರು ಮಾಡುವಂತೆ ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಜೆ.ಬಿ.ನಗರ ನಿವಾಸಿಯಾಗಿರುವ ಜೋಶ್ವಾ, ಹಿಂದಿನ 10 ವರ್ಷಗಳಿಂದ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಆತನಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇದೇ 20ರಿಂದ 2022ರ ಸೆಪ್ಟೆಂಬರ್‌ 19ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.