ADVERTISEMENT

ಸ್ಕ್ಯಾನಿಂಗ್‌ ವೇಳೆ ಲೈಂಗಿಕ ದೌರ್ಜನ್ಯ: ಟೆಕ್ನಿಷಿಯನ್ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 16:15 IST
Last Updated 7 ಸೆಪ್ಟೆಂಬರ್ 2023, 16:15 IST
Venugopala K.
   Venugopala K.

ಬೆಂಗಳೂರು: ಸ್ಕ್ಯಾನಿಂಗ್ ನೆಪದಲ್ಲಿ ವೃದ್ಧೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಅಶೋಕನನ್ನು (24) ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಅಶೋಕ, ಹೆಬ್ಬಾಳದಲ್ಲಿರುವ ಲ್ಯಾಬ್‌ವೊಂದರ ಟೆಕ್ನಿಷಿಯನ್. 60 ವರ್ಷ ವಯಸ್ಸಿನ ವೃದ್ಧೆ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಅಶೋಕ, ಹೆಬ್ಬಾಳದಲ್ಲಿ ವಾಸವಿದ್ದ. ಲ್ಯಾಬ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ದೂರುದಾರ ವೃದ್ಧೆ, ಸ್ಕ್ಯಾನಿಂಗ್ ಮಾಡಿಸುವುದಕ್ಕಾಗಿ ಆಗಸ್ಟ್ 30ರಂದು ಲ್ಯಾಬ್‌ಗೆ ಹೋಗಿದ್ದರು.’

ADVERTISEMENT

‘ಸ್ಕ್ಯಾನಿಂಗ್‌ ಯಂತ್ರದ ಮೇಲೆ ವೃದ್ಧೆಯನ್ನು ಮಲಗಿಸಿದ್ದ ಆರೋಪಿ, ಬಟ್ಟೆಗಳನ್ನು ಬಿಚ್ಚಿಸಿ ವಿವಸ್ತ್ರಗೊಳಿಸಿದ್ದ. ನಂತರ, ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಹೆದರಿದ್ದ ವೃದ್ಧೆ, ಆರೋಪಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆಯಿಂದ ಮಾಹಿತಿ: ‘ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ವೃದ್ಧೆ ದೂರಿನಲ್ಲಿ ತಿಳಿಸಿದ್ದಾರೆ. ಈ ಆರೋಪವನ್ನು ಅಶೋಕ ತಳ್ಳಿಹಾಕುತ್ತಿದ್ದಾರೆ. ಪ್ರಕರಣ ದಾಖಲಿಸಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ನಿಜಾಂಶ ಏನು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.