ADVERTISEMENT

ಉಪನಗರ ರೈಲು: ಪ್ರಧಾನಿ ಕಚೇರಿ ಪತ್ರಕ್ಕೆ ನಾಗರಿಕ ಸಂಘಟನೆಗಳ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:42 IST
Last Updated 22 ಮೇ 2019, 19:42 IST
ಸಿಟಿಜನ್ ಆಫ್ ಬೆಂಗಳೂರು ಹಾಗೂ ವಿವಿಧ ಸಂಘಟನೆಯ ಸದಸ್ಯರು ‘ಉಪನಗರ ರೈಲು ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ನೈರುತ್ಯ ರೈಲ್ವೆ ವಲಯ (ಬೆಂಗಳೂರು ವಿಭಾಗ) ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಸಿಟಿಜನ್ ಆಫ್ ಬೆಂಗಳೂರು ಹಾಗೂ ವಿವಿಧ ಸಂಘಟನೆಯ ಸದಸ್ಯರು ‘ಉಪನಗರ ರೈಲು ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ನೈರುತ್ಯ ರೈಲ್ವೆ ವಲಯ (ಬೆಂಗಳೂರು ವಿಭಾಗ) ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಉಚಿತವಾಗಿ ಭೂಮಿ ಒದಗಿಸುವ ಭರವಸೆ ಹಿಂಪಡೆದಿರುವ ಪ್ರಧಾನಿ ಕಚೇರಿ ಕ್ರಮವನ್ನು ಬೆಂಗಳೂರಿನ ನಾಗರಿಕ ಸಂಘಟನೆಗಳು ಖಂಡಿಸಿವೆ.

ಉಪನಗರ ರೈಲು ಯೋಜನೆಗಾಗಿ ಬೆಂಗಳೂರಿನ ಜನ ಮೂರು ದಶಕಗಳಿಂದ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಇತ್ತೀಚೆಗೆ ಸಭೆ ನಡೆಸಿದ್ದ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು, ಉಚಿತವಾಗಿ ಭೂಮಿ ಒದಗಿಸುವ ಭರವಸೆ ನೀಡಿದ್ದರು.

ಇದೀಗ ‘ಗುತ್ತಿಗೆ ಮೊತ್ತ ಕೂಡ ಯೋಜನಾ ವೆಚ್ಚದ ಭಾಗ’ ಎಂದು ಪ್ರಧಾನಿ ಕಚೇರಿಯಿಂದ ರೈಲ್ವೆ ಮಂಡಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದುಬೆಂಗಳೂರಿನ ಜನರಿಗೆ ನಿರಾಸೆ ತಂದಿದೆ ಎಂದು ನಾಗರಿಕ ಸಂಘಟನೆಗಳು ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಹೇಳಿವೆ.

ADVERTISEMENT

ಈ ನಿರ್ದೇಶನವನ್ನು ಕೂಡಲೇ ಹಿಂದಕ್ಕೆ ಪಡೆದು ಉಪನಗರ ರೈಲು ಯೋಜನೆ ಆರಂಭಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.