ADVERTISEMENT

ಗೃಹಿಣಿ, ಗರ್ಭಿಣಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:41 IST
Last Updated 22 ನವೆಂಬರ್ 2018, 19:41 IST

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ರಾತ್ರಿ ನಾಲ್ಕು ತಿಂಗಳ ಗರ್ಭಿಣಿ ಸನಾ ಸೈಯದ್ (23) ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊಡಿಗೇಹಳ್ಳಿಯಲ್ಲಿ ನವವಿವಾಹಿತೆ ರೋಜಾ (19) ನೇಣಿಗೆ ಶರಣಾಗಿದ್ದಾರೆ.

ಎಂ.ಎಸ್ಸಿ ಪದವೀಧರೆಯಾದ ಸನಾ, ಹೊಸೂರು ರಸ್ತೆಯ ಆಸ್ಪತ್ರೆಯೊಂದರಲ್ಲಿ ಕ್ಲಿನಿಕಲ್ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಎರಡು ವರ್ಷಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ನದೀಮ್ ಅವರನ್ನು ವಿವಾಹವಾಗಿದ್ದರು. ಸನಾ ಸಂಜೆ ತಮ್ಮ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದು, ಪತಿ 9 ಗಂಟೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ಕೊಡಿಗೇಹಳ್ಳಿ: ಬಾಗೇಪಲ್ಲಿಯವರಾದ ರೋಜಾ, ತಮ್ಮ ಊರಿನವರೇ ಆದ ಬಾಬಾಜಾನ್ ಎಂಬುವರನ್ನು ಮೂರು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದರು. ದಂಪತಿ ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದರು.

ಮಧ್ಯಾಹ್ನ 3.30ರ ಸುಮಾರಿಗೆ ತಾಯಿಗೆ ಕರೆ ಮಾಡಿದ್ದ ರೋಜಾ, ‘ನಾನು ಈತನನ್ನು ಮದುವೆ ಆಗಿ ತಪ್ಪು ಮಾಡಿಬಿಟ್ಟೆ. ನನ್ನ ನಡತೆ ಬಗ್ಗೆ ಬಹಳ ಅನುಮಾನ ಪಡುತ್ತಾನೆ. ನಿಮ್ಮ ಮಾತು ಕೇಳಬೇಕಿತ್ತು’ ಎಂದು ಕಣ್ಣೀರಿಟ್ಟಿದ್ದರು. ಆಗ ಸಮಾಧಾನ ಹೇಳಿದ್ದ ತಾಯಿ, ‘ಈಗಲೂ ಆತನನ್ನು ಬಿಟ್ಟು ಬಾ. ಕಷ್ಟಪಟ್ಟು ಸಂಸಾರ ನಡೆಸಬೇಡ. ನಾವು ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದಿದ್ದರು.

ADVERTISEMENT

ಬಾಬಾಜಾನ್ ಕೆಲಸ ಮುಗಿಸಿಕೊಂಡು 9 ಗಂಟೆಗೆ ಮನೆಗೆ ಬಂದಾಗ ರೋಜಾ ನೇಣಿಗೆ ಶರಣಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.