ADVERTISEMENT

ಬರಲಿದೆ ಬಿಸಿನೀರಿನ ಈಜುಕೊಳ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:57 IST
Last Updated 20 ನವೆಂಬರ್ 2018, 19:57 IST
ಜಯನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಕೊಳ
ಜಯನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಕೊಳ   

ಬೆಂಗಳೂರು: ‘ಜಯನಗರದಲ್ಲಿಇದೇ ಮೊದಲ ಬಾರಿಗೆ ಬಿಸಿ ನೀರಿನ ಈಜುಕೊಳ ನಿರ್ಮಾಣವಾಗಲಿದೆ. ಎಲ್ಲರೂ ಮಳೆ, ಚಳಿ, ಗಾಳಿ ಎನ್ನದೇ ವರ್ಷ ಪೂರ್ತಿ ಈಜಲು ಸಹಕಾರಿಯಾಗುವಂತೆ ಈ ಕೊಳ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

‘ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಪರಿಶೀಲಿಸಿದ ಅವರು ಫೆಬ್ರುವರಿ ಮೊದಲ ವಾರದೊಳಗೆ ಕೊಳ ಉದ್ಘಾಟನೆಗೆ ಅನುವಾಗುವಂತೆ ಕೆಲಸ ಮುಗಿಸಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

‘ಮಕ್ಕಳು ಮತ್ತು ಹಿರಿಯರಿಗೆ ಪ್ರತ್ಯೇಕ ಕೊಳ ಇರಲಿದೆ. ಎರಡು ವರ್ಷಗಳಿಂದ ಕೊಳ ನಿರ್ಮಾಣದ ಕಾಮಗಾರಿ ಪ್ರಗತಿಯಾಗಿಲ್ಲ. ಶೇ 70ರಷ್ಟು ಮಾತ್ರ ಪೂರ್ಣಗೊಂಡಿದೆ. ಬೇಸಿಗೆ ಶಿಬಿರ, ಈಜು ತರಬೇತಿ, ಅಂತರರಾಷ್ಟ್ರೀಯಮಟ್ಟದ ಈಜು ಸ್ಪರ್ಧೆಗಳನ್ನು ಆಯೋಜಿಸುವುದು, ಉತ್ತಮ ಈಜುಪಟುಗಳನ್ನು ತಯಾರು ಮಾಡುವ ಮಹತ್ವಾಕಾಂಕ್ಷೆಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.