ADVERTISEMENT

ಶಿವಗಂಗಾ ಶಾಲೆಯಲ್ಲಿ ತರಕಾರಿ ಮೇಳ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:57 IST
Last Updated 14 ಜುಲೈ 2019, 19:57 IST
ತರಕಾರಿ ಮೇಳದಲ್ಲಿ ಪಾಲ್ಗೊಂಡಿದ್ದ ಮಕ್ಕಳು
ತರಕಾರಿ ಮೇಳದಲ್ಲಿ ಪಾಲ್ಗೊಂಡಿದ್ದ ಮಕ್ಕಳು   

ದಾಬಸ್ ಪೇಟೆ: ಸಾಲಾಗಿ ಜೋಡಿಸಿದ ತರಕಾರಿಗಳು. ಇಂತಹ ತರಹೇವಾರಿ ತರಕಾರಿಗಳನ್ನು ಕುತೂಹಲದಿಂದ ವೀಕ್ಷಿಸಿದ ಮಕ್ಕಳು.

ಇದು ಕಂಡು ಬಂದದ್ದು ಹೊನ್ನಮ್ಮ ಗವಿಮಠದ ಶಿವಗಂಗಾ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ತರಕಾರಿ ಮೇಳದಲ್ಲಿ.

ಮಕ್ಕಳು ಮನೆಗಳಿಂದ ವಿವಿಧ ಬಗೆಯ ತರಕಾರಿಗಳನ್ನು ತಂದಿದ್ದರು. ಉತ್ತಮ ಆರೋಗ್ಯಕ್ಕೆ ತರಕಾರಿಗಳ ಸೇವನೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಶಿಕ್ಷಕರು ಮಕ್ಕಳಿಗೆ ತಿಳಿಸಿದರು.

ADVERTISEMENT

ಮುಖ್ಯ ಶಿಕ್ಷಕ ಎಸ್.ಸಿದ್ದಲಿಂಗ ಸ್ವಾಮಿ, ‘ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಹಣ್ಣು ಮತ್ತು ತರಕಾರಿ ದಿನವನ್ನು ಆಚರಿಸುತ್ತೇವೆ. ಮಕ್ಕಳ ಓದು ಹಾಗೂ ಆಟದ ಮಧ್ಯೆ ತರಕಾರಿಗಳ ಹೆಸರುಗಳೇ ಗೊತ್ತಿಲ್ಲ. ಅದನ್ನು ನೆನಪಿಸುವ ಹಾಗೂ ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.