ADVERTISEMENT

ವೋಟ್‌ ಮಾಡೋಣ ಬನ್ನಿ: ಪಕ್ಷಕ್ಕಿಂತ ವ್ಯಕ್ತಿಯನ್ನು ನೋಡಿ ವೋಟ್‌ ಹಾಕಿ- ಆಶಿಕಾ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 20:12 IST
Last Updated 19 ಮಾರ್ಚ್ 2019, 20:12 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   

ನಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಾಗ ನಮ್ಮ ನಿರ್ಧಾರವೂ ಸರಿಯಾಗಿರಬೇಕು.ಪಕ್ಷಕ್ಕಿಂತ ವ್ಯಕ್ತಿಯನ್ನು ನೋಡಿ ವೋಟ್‌ ಹಾಕಬೇಕು. ನಾವು ಆಯ್ಕೆ ಮಾಡುವ ವ್ಯಕ್ತಿಯಿಂದ ದೇಶಕ್ಕೆ, ಜನತೆಗೆ ಏನು ಒಳಿತಾಗಲು ಸಾಧ್ಯ ಎಂಬುದನ್ನು ಯೋಚಿಸದೇ ಮುಂದುವರೆಯಬಾರದು.

ವ್ಯಕ್ತಿಯ ಸಾಧನೆಗಳೇನು, ವೈಫಲ್ಯಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ದೇಶ ಅಭಿವೃದ್ಧಿ ಬಗ್ಗೆ ನೀವಿಟ್ಟ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವಂತಹ ವ್ಯಕ್ತಿಯನ್ನೇಆಯ್ಕೆ ಮಾಡಿ.ಮತದಾನ ಪ್ರಕ್ರಿಯೆಯಲ್ಲಿಜವಾಬ್ದಾರಿತನದಿಂದ ನಡೆದುಕೊಂಡು ದೇಶಮುನ್ನಡೆಸಿಕೊಂಡು ಹೋಗುವ ನಾಯಕನಿಗೆ ನಿಮ್ಮ ಮತ ಹಾಕಿ.

–ಆಶಿಕಾ ರಂಗನಾಥ್‌, ನಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.