ADVERTISEMENT

ವಿಶ್ವ ದಾಖಲೆ ಬರೆದ ಅನೂಹ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 21:55 IST
Last Updated 15 ಫೆಬ್ರುವರಿ 2020, 21:55 IST
ಡಾ.ರೂಪಾ ರಾವ್
ಡಾ.ರೂಪಾ ರಾವ್   

ಬೆಂಗಳೂರು: ಜೀವನ ಕೌಶಲ ತರಬೇತುಗಾರರಾಗಿರುವ ಮಕ್ಕಳ ಸಮಾಲೋಚಕಿ ಡಾ.ರೂಪಾ ರಾವ್ ನಡೆಸುವ 10 ದಿನಗಳ ಅನೂಹ್ಯ ಬೇಸಿಗೆ ಶಿಬಿರವು ಬ್ರಿಟನ್‍ನ ವರ್ಲ್ಡ್‌ ಬುಕ್ ಆಫ್ರೆಕಾರ್ಡ್ಸ್‌ನ ಪುಟ ಸೇರಿದೆ.

‘10 ದಿನಗಳ ಶಿಬಿರದಲ್ಲಿ 32ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.ಮಕ್ಕಳಿಗೆ ಬಾಲ್ಯದಲ್ಲೇ10 ಜೀವನ ಕೌಶಲಗಳ ತರಬೇತಿ ನೀಡಲಾಗುತ್ತಿದ್ದು,ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‍ಒ) ನೀತಿಗಳಿಗೆ ಅನುಗುಣವಾಗಿ ಶಿಬಿರ ನಡೆಸುತ್ತಿದೆ.ಶಿಬಿರದ ಅನನ್ಯತೆ ಗುರು ತಿಸಿ ವಿಶ್ವದಾಖಲೆ ಗೌರವ ಸಲ್ಲಿಸಲಾಗಿದೆ’ ಎಂದುಬ್ರಿಟನ್‍ನ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ಸ್‌ನ ಅಧ್ಯಕ್ಷ ಎಸ್.ಶುಕ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT