ADVERTISEMENT

ಏಕಾಗ್ರತೆಯಿಂದ ಸಾಧನೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 8:15 IST
Last Updated 13 ಸೆಪ್ಟೆಂಬರ್ 2011, 8:15 IST

ಹುಮನಾಬಾದ್: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇ್ದ್ದದಲ್ಲಿ, ಅಸಾಧ್ಯವಾದ ಕೆಲವನ್ನು ಸಾಧಿಸಬಹುದು ಎಂದು ಖ್ಯಾತ ವಾಸ್ತುತಜ್ಞ ಡಾ.ರಮೇಶ ಕಾಮತ ಅಭಿಪ್ರಾಯಪಟ್ಟರು. ಸಂಜೀವಿನಿ ಆಸ್ಪತ್ರೆ, ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡಿದ್ದ ನೇತ್ರನಿರತ ಧ್ಯಾನ, ಭೂಲಯ ಮತ್ತು ವ್ಯಕ್ತಿತ್ವ ವಿಕಸನ ಕುರಿತಾದ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಉಪನ್ಯಾಸ ನೀಡಿದರು.

ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ವೀರುಪಾಕ್ಷಪ್ಪ ಅಗಡಿ ಅಧ್ಯಕ್ಷತೆ ವಹಿಸಿದ್ದರು.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ, ಬಸವತೀರ್ಥ ವಿದ್ಯಾಪೀಠ ಸಂಸ್ಥೆಯ ಕಾರ್ಯಾಧ್ಯಕ್ಷ ಬಸವರಾಜ ತಂಬಾಕೆ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾಣಿಕಪ್ಪ ಗಾದಾ,ರೋಟರಿ ಕ್ಲಬ್ ಅಧ್ಯಕ್ಷ ಡಾ.ಚಂದ್ರಕಾಂತ ಖೇಡೆ, ಅಶೋಕ ಜಿ.ಹಿರೇಮಠ, ಡಾ.ಸಂಗೀತಾ ಹುಲಸೂರೆ, ವೀರಂತರೆಡ್ಡಿ ಜಂಪಾ, ಪ್ರೊ.ಸಿ.ಕೆ.ಪಾಟೀಲ, ಡಾ.ಸೋಮನಾಥ ಯಾಳವಾರ, ಕಾಶಿನಾಥರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಗಮೇಶ ಪಾಟೀಲ ಸ್ವಾಗತಿಸಿದರು. ಡಾ.ನಾಗನಾಥ ಹುಲಸೂರೆಪ್ರಾಸ್ತಾವಿಕ ಮಾನಾಡಿದರು. ಮಲ್ಲಿಕಾರ್ಜುನ ನೀಲಕಂಠೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.