ADVERTISEMENT

ಕಾಯಕದಲ್ಲಿ ಸೇವಾನಿಷ್ಠೆ ಇರಲಿ: ಪಟ್ಟದೇವರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 5:10 IST
Last Updated 25 ಸೆಪ್ಟೆಂಬರ್ 2013, 5:10 IST

ಭಾಲ್ಕಿ: ‘ಸೇವಾನಿಷ್ಠೆಯಿಂದ ಮಾಡುವ ಪ್ರತಿ ಕೆಲಸವೂ ಸಫಲತೆ ನೀಡಬಲ್ಲದು’ ಎಂದು ಡಾ.ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.
ಪಟ್ಟಣದ ಚನ್ನಬಸವ ಆಶ್ರಮದಲ್ಲಿ ಶನಿವಾರ ವೀರಶೈವ ಲಿಂಗಾಯಿತ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘದ ತೃತೀಯ ವಾರ್ಷಿಕ ಮಹಾಸಭೆ ಯಲ್ಲಿ ಅವರು ಮಾತನಾಡಿದರು.

ಆರ್ಥಿಕ ಸಂಸ್ಥೆಗಳು ಧನಲಾಭ ಗುರಿಯಾಗಿಸಿಕೊಳ್ಳದೆ ಸಮಾಜಮುಖಿ ಕಾರ್ಯ ಮಾಡಿದರೆ ಯಶಸ್ಸು ಮತ್ತು ಗೌರವ ಎರಡೂ ಸಾಧಿಸಬಹುದು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ ಮಾತನಾಡಿ, ಕೇವಲ ಮೂರು ವರ್ಷಗಳಲ್ಲಿ ಸಂಘವು 2.29ಲಕ್ಷ ರೂಪಾಯಿ ಲಾಭ ಗಳಿಸಿ, ಹೆಸರನ್ನೂ ಸಂಪಾದಿಸಿದೆ ಎಂದರು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ ಮಾತನಾಡಿ, ಬ್ಯಾಂಕಿನ ಸದಸ್ಯರ ಅವಿರತ ಸಹಕಾರ ನಮ್ಮ ಯಶಸ್ಸಿನ ಶಕ್ತಿಯಾಗಿದೆ ಎಂದರು.
ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ ಬಿರಾದಾರ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರತ್ನದೀಪ ಹುಲಸೂರೆ, ಶಿಕ್ಷಕರ ಸಂಘದ ಅಧ್ಯಕ್ಷ ಷಡಕ್ಷರಿ ಸ್ವಾಮಿ, ಶರಣಪ್ಪ ರಾಚೋಟೆ, ಪ್ರಕಾಶ ಮಹಾಗಾವೆ, ಬಸವರಾಜ ಸ್ವಾಮಿ, ರಾಜಪ್ಪ ಪಾಟೀಲ, ಗೋವಿಂದರಾವ ಬಿರಾದಾರ, ರಾಜಕುಮಾರ ಪಾಟೀಲ ಹಜನಾಳ ಮುಂತಾದವರು ಇದ್ದರು. ವ್ಯವಸ್ಥಾಪಕ ವೀರಶೆಟ್ಟಿ ಇಟಗೆ ಸ್ವಾಗತಿಸಿ, ನಾಗಭೂಷಣ ಮಾಮಡಿ ನಿರೂಪಿಸಿ, ಮಲ್ಲಿಕಾರ್ಜುನ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.