ADVERTISEMENT

ಗುಣಮಟ್ಟ ಶಿಕ್ಷಣ ಮುಖ್ಯ: ಅಬ್ದುಲ್ ಖದೀರ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 5:47 IST
Last Updated 5 ಜುಲೈ 2013, 5:47 IST

ಹುಮನಾಬಾದ್: ಕಟ್ಟಡಕ್ಕಿಂತ ಗುಣಮಟ್ಟದ ಶಿಕ್ಷಣ ಮುಖ್ಯ ಎಂದು ಶಾಹಿನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅಭಿಪ್ರಾಯಪಟ್ಟರು.

2013ನೇ ಸಾಲಿನ ಪಿ.ಯು.ಸಿ ನಂತರದ ಸಿಇಟಿ ಮೂಲಕ ವೈದ್ಯಕೀಯ ಶಿಕ್ಷಣ ಪ್ರವೇಶ ಅವಕಾಶ ಪಡೆದ ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಸತಿ ಶಾಲೆ ಆರಂಭಿಸುವಾಗ ಪ್ರವೇಶ ಪಡೆದಿದ್ದ ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಒದಗಿಸುವದೂ ಕಷ್ಟಸಾಧ್ಯ ಆಗಿತ್ತು.
ಆ ಸ್ಥಿತಿಯಲ್ಲಿ ಆರಂಭಗೊಂಡ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ,  ಉತ್ತಮ ಫಲಿತಾಂಶ ತಂದಿದ್ದರ ಪರಿಣಾಮ ವಸತಿಸಹಿತ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಈಗ 900ಕ್ಕೆ ವೃದ್ಧಿಯಾಗಿದೆ.

2013ನೇ ಸಾಲಿನಲ್ಲಿ ಸಂಸ್ಥೆಯ 34ವಿದ್ಯಾರ್ಥಿಗಳು 1000ಒಳಗಿನ ರ‍್ಯಾಂಕ್ ಡೆದ್ದು ವಿಶೇಷ. ರಾಜ್ಯದ 12ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ತಮ್ಮ ಸಂಸ್ಥೆ ಕೂಡ ಒಂದಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಅವರು ಹೇಳಿದರು.

ಅತ್ಯಂತ ಕಡಿಮೆ ಅವಧಿಯಲ್ಲಿ ಸಂಸ್ಥೆಯಲ್ಲಿ ಇಷ್ಟೊಂದು ಮಕ್ಕಳು ಪ್ರವೇಶ ಪಡೆದಿರುವುದಕ್ಕೆ ಸಂಸ್ಥೆಯಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಕಾರಣ ಎಂದು ಪ್ರಾಚಾರ್ಯ ಅಬ್ದುಲ್ ಸಮದ್ ಹೇಳಿದರು.

ನಿರಂತರ ಪ್ರಯತ್ನದ ಜೊತೆಗೆ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಉಪನ್ಯಾಸಕ ಶಾಂತಕುಮಾರ ಪತ್ರಿ ಸಲಹೆ ನೀಡಿದರು. ಲಿಂಗಮ್ಮ ಜ್ಯೋತಿ, ಆಸೀಫಖಾನ್, ಅಮೂಲ, ರಾಮಕುಮಾರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.