ADVERTISEMENT

`ಗುಣಾತ್ಮಕ ಶಿಕ್ಷಣಕ್ಕೆ ನಂದಿನಿ ವಿದ್ಯಾಲಯ ಮಾದರಿ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 5:49 IST
Last Updated 4 ಡಿಸೆಂಬರ್ 2012, 5:49 IST

ಚಿಟಗುಪ್ಪಾ: ಗ್ರಾಮೀಣ ಭಾಗಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಿರ್ಣಾದ ಪೂಜ್ಯ ಎನ್.ವಿ.ಮಠಪತಿ ಶಿಕ್ಷಣ ಸಂಸ್ಥೆಯ ನಂದಿನಿ ಸಮುಹ ಸಂಸ್ಥೆಗಳು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನ ರಾಜ್ಯಕ್ಕೆ ಮಾದರಿ ಆಗಿದೆ ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ತಿಳಿಸಿದ್ದಾರೆ.

ಹತ್ತಿರದ ನಿರ್ಣಾ ಗ್ರಾಮದಲ್ಲಿ ಭಾನುವಾರ ವೈದ್ಯ ಪಂಡಿತರಾಗಿದ್ದು ನಾಗಯ್ಯ ಸ್ವಾಮಿ ಮಠಪತಿ ಅವರ 17ನೇ ಪುಣ್ಯಸ್ಮರಣೆ, ಪೂಜ್ಯ ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ, ಅಂಚೆ ಇಲಾಖೆಯ ಅಂಚೆ ಚೀಟಿ ಪ್ರದರ್ಶನ ಹಾಗೂ ನಂದಿನಿ ಮುಕ್ತ ಶಿಕ್ಷಣ ಮಹಾವಿದ್ಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹುಮನಾಬಾದ ತಾಲ್ಲೂಕಿನ ನಿರ್ಣಾ, ಮಂಗಲಗಿ, ಕಪ್ಪರಗಾಂವ, ಗುಲಬರ್ಗಾ ಇತರೆಡೆಗಳಲ್ಲಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನಂದಿನಿ ವಿದ್ಯಾಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಆಗಿದ್ದು, ಖಾಸಗಿ ಸಂಸ್ಥೆಗಳ ಸಮಗೃ ಬೆಳವಣಿಗೆಗೆ ಸರ್ಕಾರದ, ಜನನಾಯಕರ ಸಹಕಾರ ಮುಖ್ಯವಾಗಿ ಬೇಕು ಎಂದು ನುಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಎಂ.ವೀರೇಶ್ ಪ್ರಾಸ್ತಾವಿಕ ಮಾತನಾಡಿ, ಮುಕ್ತ ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ರಾಜ್ಯ ಮುಕ್ಯ ವಿಶ್ವ ವಿದ್ಯಾಲಯ, ಸಿಎಂಜೆ ವಿಶ್ವವಿದ್ಯಾಲಯ, ಎಲಮ್ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೆ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಶುಲ್ಕ ನೀಡಿ ಪ್ರವೇಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಉನ್ನತ ವ್ಯಾಸಂಗ ಮಾಡಲು ಸೂಕ್ತ ಅವಕಾಶ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಲಾಭ ಪಡೆಯಬೇಕು ಎಂದು ತಿಳಿಸಿದರು.

ಪದ್ಮಾಕರ್ ಪಾಟೀಲ್, ಸೋಮನಾಥ ಪಾಟೀಲ್, ಜಿಲ್ಲಾ ಅಂಚೆ ಅಧೀಕ್ಷಕ ಜಗನ್ನಾಥರಾವ್,ಹಿರಿಯ ಪೊಲೀಸ್ ನಿರೀಕ್ಷಕ ಜಿ.ಎಸ್.ಹೆಬ್ಬಾಳ್, ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್.ಚಿತ್ತಕೋಟೆ, ಕೆ.ಎಸ್.ವರ್ಮಾ, ಎಲ್.ಶಾಯರೆಡ್ಡಿ, ಭೀಮರೆಡ್ಡಿ ಆಣದೂರ್, ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಾಮಾರೆಡ್ಡಿ ಹಾಸರೆಡ್ಡಿ ಮಾತನಾಡಿ ನಂದಿನಿ ವಿದ್ಯಾಲಯಗಳ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಎಸ್‌ಐ ಬಸವರಾಜ್ ಫೂಲಾರೆ, ನೀಲಕಂಠ ಇಸ್ಲಾಮಪೂರ್, ಈಶ್ವರರೆಡ್ಡಿ ವೀರಾರೆಡ್ಡಿ, ಸಾದಕ ಪಟೇಲ್, ಸಿಆರ್‌ಪಿ ರಾಜಣ್ಣ, ಮಲ್ಲಿಕಾರ್ಜುನ ಪಾಟೀಲ್, ಆನಂದರಾಜ್ ಮಹಾರಾಜ್‌ರು, ಅಶೋಕ ಮಠಪತಿ, ಮಹಾರುದ್ರಪ್ಪ ಆಣದೂರ್, ವಿಠಲರೆಡ್ಡಿ ಚುಡಾ, ಹಣಮಂತರಾವ ಪಾಟೀಲ್, ಶ್ರೀನಿವಾಸ ಪತ್ತಾರ್,ರುದ್ರಪ್ಪ ಪೋಸ್ಟ್ ಮಾಸ್ಟರ್, ಮನೋಹರ ಕಂಬಾರ್, ರಾಜೇಂದ್ರ ಪಾಟೀಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶಂಕರರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರೇವಣಯ್ಯ ಮಠಪತಿ ಸ್ವಾಗತಿಸಿದರು. ಅಂಬುಜಾ ನಿರೂಪಿಸಿದರು. ಬಸವರಾಜ್ ಬನ್ನಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.