ADVERTISEMENT

‘ದೇಶಾಭಿಮಾನ ಬೆಳೆಸುವ ಕವನ ರಚಿಸಿ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 5:24 IST
Last Updated 27 ಮಾರ್ಚ್ 2018, 5:24 IST
ಬೀದರ್‌ನಲ್ಲಿ ಈಚೆಗೆ ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಪ್ರೊ.ಎಸ್.ಎಸ್. ದೇವರಕಲ್ ಉದ್ಘಾಟಿಸಿದರು
ಬೀದರ್‌ನಲ್ಲಿ ಈಚೆಗೆ ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಪ್ರೊ.ಎಸ್.ಎಸ್. ದೇವರಕಲ್ ಉದ್ಘಾಟಿಸಿದರು   

ಬೀದರ್: ‘ಕವಿಗಳು ಓದುಗರಲ್ಲಿ ದೇಶಾಭಿಮಾನ ಬೆಳೆಸುವಂಥ ಕವನಗಳನ್ನು ರಚಿಸಬೇಕು’ ಎಂದು ಸಾಹಿತಿ ದತ್ತಾ ಮೈಲೂರಕರ್‌ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಮಾತೃಭಾಷೆಯನ್ನು ಪ್ರೀತಿಸಬೇಕು. ಜತೆಗೆ ಸಹೋದರ ಭಾಷೆಗಳನ್ನೂ ಗೌರವಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಪೂರಕ ಸಂದೇಶಗಳನ್ನು ಒಳಗೊಂಡ ಕವನ ರಚಿಸಲು ಕವಿಗಳು ಪ್ರಯತ್ನಿಸಬೇಕು’ ಎಂದು ಉದ್ಘಾಟನೆ ಮಾಡಿದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಅಧ್ಯಕ್ಷ ಪ್ರೊ.ಎಸ್‌.ಬಿ. ಬಿರಾದಾರ ಸಲಹೆ ಮಾಡಿದರು.

ಪ್ರೊ.ಎಸ್.ಎಸ್. ದೇವರಕಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ದೇವೆಂದ್ರ ಕಮಲ ಇದ್ದರು. ಎಸ್.ಕೆ.ಮರಗುತ್ತಿ, ಕ್ಷಮಾ ರಘುರಾಮ, ಗೋಪಾಲಸಿಂಗ್ ರಾಠೋಡ, ಪ್ರೊ.ವಿಮಲ ಆರ್.ಚಾಲಕ, ಪ್ರೊ.ಕಲ್ಪನಾ ದೇಶಪಾಂಡೆ, ಶೈಲಜಾ ದಿವಾಕರ, ಪ್ರೊ.ಅನಿಲಕುಮಾರ ಆಣದೂರೆ, ಸುಜೀತ್‌ಕುಮಾರ, ಅಮಿರೊದ್ದೀನ್, ಸೈಯದ್‌ ಮೊಹಮ್ಮದ್‌ ಖಾದ್ರಿ, ಪ್ರೊ.ಕಲ್ಪನಾ ಚಿಕಮುರ್ಗೆ, ಡಾ.ಹಣಮಂತಪ್ಪ ಸೇಡಂಕರ್‌, ಪ್ರದೀಪಕುಮಾರ ಮೀಸೆ, ರಘುನಾಥ ಹಡಪದ, ಪುಷ್ಪಾ ಕನಕ, ಕೇತಕಿ ಎಸ್.ಬಿರಾದಾರ, ಶೈಲಜಾ ಹುಡಗಿ, ಓಂಕಾರ ಪಾಟೀಲ, ಪ್ರೊ.ಓಂಪ್ರಕಾಶ ದಡ್ಡೆ, ನಾಗಶೆಟ್ಟಿ ಪಾಟೀಲ ಗಾದಗಿ ಕವನ ವಾಚಿಸಿದರು.

ಪ್ರೊ.ಉಮಾಕಾಂತ ಮೀಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಸತ್ಯಮೂರ್ತಿ ಸ್ವಾಗತಿಸಿದರು. ರಮೇಶ ಬಿರಾದಾರ ನಿರೂಪಿಸಿದರು. ಬಸವರಾಜ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.