ADVERTISEMENT

ಬಸವಣ್ಣನವರ ವಚನಗಳು ಸಾರ್ವಕಾಲಿಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:55 IST
Last Updated 12 ಜನವರಿ 2012, 8:55 IST

ಹುಮನಾಬಾದ್: ಬಸವೇಶ್ವರ ವಚನಗಳು ಸಾರ್ವಕಾಲಿಕ ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಹೇಳಿದರು. ಬಸವಸೇವಾ ಪ್ರತಿಷ್ಠಾನ ನಗರದ ಬಸವರಾಜ ರುದ್ರವಾಡಿ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ 126ನೆಯ ಬಸವಜ್ಯೋತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ದರು.

ತಾಯಿತ ಮಂತ್ರ, ಅಂಧ ಶ್ರದ್ಧೆಗೆ ಬಲಿಯಾಗದೇ ಸರ್ವರು ನಿಜ ಬದುಕಿನ ಮಾರ್ಗ ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ ಆತ್ಮವಿಸ್ವಾಸದಿಂದ ಬಾಳಿ ಬದುಕಬೇಕು ಎಂದರು.

ವಿಶೇಷ ಉಪನ್ಯಾಸನ ನೀಡಿದ ಪ್ರೊ.ಡಿ.ಅಜೇಂದ್ರಸ್ವಾಮಿ 12ನೇ ಶತಮಾನದ ವಚನ ಚಳವಳಿ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಯತ್ನಿಸಿದ ಬಸವಣ್ಣನವರಿಗೆ ಜಾತ್ಯತೀತವಾಗಿ ಇಡೀ ಮನಕುಲ ಋಣಿಯಾಗಿರಬೇಕು ಎಂದರು.

ಬಸವಣ್ಣನವರ `ಆರು ಮುನಿದು ನಮ್ಮನೇನು ಮಾಡುವರು~ ಎಂಬ ವಚನ ಅವರ ನಿರ್ದಾಕ್ಷಿಣ್ಯತೆ ಸೂಚಿಸುತ್ತದೆ ಎಂದು ವಿವರಿಸಿದದರು. ಅವರು, ಸಮಸ್ಯೆ ಕೇಳಿ ಹೋಗುವವರು ಇರುವವರೆಗೆ ತಾಯಿತ ಕೊಡುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ ಸಿ.ಎಸ್.ಪಾಟೀಲ ಉದ್ಘಾಟಿಸಿದರು.
 
ಬೀದರ್‌ನ ಕಾಶೆಪ್ಪ ಧನ್ನೂರ, ಶಹಾಬಾದ್ ನಿವೃತ್ತ ಪಾಧ್ಯಾಪಕಿ ನೀಲಮ್ಮ ಕಠ್ನಳ್ಳಿ ಮುಖ್ಯ ಅತಿಥಿಯಾಗಿದ್ದರು. ಶೋಭಾ ಔರಾದೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನ ಅಧ್ಯಕ್ಷ ಡಾ.ಎಸ್.ಆರ್.ಮಠಪತಿ, ಡಾ.ಸೋಮನಾಥ ಯಾಳವಾರ, ಪ್ರಮುಖರಾದ ಶಿವಶರಣಪ್ಪ ಬಪ್ಪಣ್ಣ, ಎಂ.ಜಿ.ಹವಾಲ್ದಾರ, ಮಲ್ಲಿಕಾರ್ಜುನ ರಟಕಲೆ, ಅಶೋಕ ಮಠಪತಿ, ಮುಸ್ತರಿ ತಂಗಾ, ವಿವಿಧ ಇಲಾಖೆ ಇಂಜಿನಿಯರ್‌ಗಳು, ಶಿಕ್ಷಕರು, ಮಾತೆಯರು ಉಪಸ್ಥಿತರಿದ್ದರು. ಕರುಣಾ ಸಲಗರ್ ಪ್ರಾರ್ಥಿಸಿದರು. ಬಸವರಾಜ ರುದ್ರವಾಡಿ ಸ್ವಾಗತಿಸಿದರು. ಪ್ರೊ.ಆಯ್.ಆರ್.ಚನ್ನಗಿರಿ ನಿರೂಪಿಸಿದರು. ರಮೇಶ ಮಠಪತಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.