ಚಿತ್ತಾಪುರ: ತಾಲ್ಲೂಕಿನಿಂದ ಮಳಖೇಡವರೆಗೆ ನಿರ್ಮಾಣ ಮಾಡುತ್ತಿರುವ ರಸ್ತೆಯಲ್ಲಿೆ ನಿರ್ಮಿಸಿದ್ದ ಕಿರು ಸೇತುವೆಗೆ ಹಾಕಿದ್ದ ಕೊಳವೆಯು, ಎತ್ತರವಾಗಿ ರೈತರ ಜಮೀನಿನಲ್ಲಿ ನೀರು ಸಂಗ್ರಹವಾಗುತ್ತಿತ್ತು.
ಈ ಸಮಸ್ಯೆ ಬಗ್ಗೆ ಪ್ರಜಾವಾಣಿ ಜೂ. 3ರ ಸಂಚಿಕೆಯಲ್ಲಿ ಬೆಳಕು ಚೆಲ್ಲಿತ್ತು. ಕೂಡಲೇ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ನೀರು ಸಂಗ್ರಹವಾಗುತ್ತಿದ್ದ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ.
ಮರಗೋಳ ನಾಲಾದ ಸಮೀಪ ಇರುವ ಹೊಲದ ಪಕ್ಕದ ಕಿರು ಸೇತುವೆ ನಿರ್ಮಾಣ ಮಾಡುವ ಸಮಯದಲ್ಲಿ ಸೇತುವೆಗೆ ಕೊಳವೆಯನ್ನು ಭೂಮಿಗಿಂತ ಮೇಲ್ಮಟ್ಟದಲ್ಲಿ ಹಾಕಲಾಗಿತ್ತು.
ಹೀಗಾಗಿ ಮಳೆ ನೀರು ಹರಿದು ಹೋಗದೆ ಹೊಲದ ತುಂಬಾ ನಿಂತು ಹೊಲದ ರೈತರಿಗೆ ಕೃಷಿ ಚಟುವಟಿಕೆಗಳು, ಕೆಲಸಗಳು ಮಾಡಲಾಗದೆ ತೀವ್ರ ತೊಂದರೆಯಾಗಿತ್ತು.
ಈಡೇರಿದ ಭರವಸೆ: ಹೊಲದಲ್ಲಿ ಮಳೆ ನೀರು ನಿಲ್ಲದಂತೆ ಮತ್ತು ನಿಂತಿರುವ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹ್ಮದ್ ಇಸ್ಮಾಯಿಲ್ ಪಟೇಲ್ ಭರವಸೆ ನೀಡಿದ್ದರು.
ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಗಮನಿಸಿ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಸಿದ್ದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.