ADVERTISEMENT

ಯಾರೂ ಕಸಿಯದ ಸಂಪತ್ತು ಮಕ್ಕಳಿಗೆ ಕೊಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:10 IST
Last Updated 3 ಅಕ್ಟೋಬರ್ 2011, 8:10 IST

ಭಾಲ್ಕಿ: ಕಳ್ಳ ಕದಿಯಲಾರದ, ಯಾರೂ ಕಸಿಯಲಾರದ,  ಖರ್ಚು ಮಾಡಿದಷ್ಟೂ ಹೆಚ್ಚಾಗುವಂಥ ಜ್ಞಾನವೇ ಶಿಕ್ಷಣ. ಅದನ್ನು ನಮ್ಮ ಮಕ್ಕಳಿಗೆ ಗುಣಮಟ್ಟದಿಂದ ಕೊಡಬೇಕು ಎಂದು ಪತ್ರಕರ್ತ ಚಂದ್ರಕಾಂತ ಬಿರಾದಾರ ನುಡಿದರು.  ತಾಲ್ಲೂಕಿನ ಬೀರಿ (ಬಿ) ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಸದ್ಗುರು ವಿದ್ಯಾಲಯದಿಂದ ಭಾನುವಾರ ಆಯೋಜಿಸಿದ್ದ ಪಾಲಕರ ಅಂತರ್ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು, ತಾಂಡಾಗಳಲ್ಲಿನ ಹಿಂದುಳಿದ ವರ್ಗದ ಮಕ್ಕಳನ್ನು ತೆಗೆದುಕೊಂಡು ಭಾಲ್ಕಿಯ ಸದ್ಗುರು ವಿದ್ಯಾಲಯದವರು ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸಲಾಯಿತು. ಮಲ್ಲಿಕಾರ್ಜುನ ಕೋಟೆ, ಸಂಜೀವಕುಮಾರ ಮಾಶಟ್ಟೆ, ಸುಭಾಷ ಸೊನಾಳೆ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಬಿರಾದಾರ, ಬಾಬುರಾವ ಸಂಗುಳಗೆ, ಕೋಂಡಿಬಾರಾವ ಕಾಳಬಾ, ಲಕ್ಷ್ಮಿ ಮಾಶಟ್ಟೆ, ಅಂಕುಶ ಢೋಲೆ, ಸಂಜೀವ ಬಿರಾದಾರ, ಬಾಲಾಜಿ ಬಿರಾದಾರ, ಸಂತೋಷ ರಾಗಾ, ಶಿವಶಂಕರ ಕಾರಬಾರಿ, ಬಸವರಾಜ ರಾಗಾ, ಶಾಮರಾವ ಬಿರಾದಾರ, ರಿಯಾಜ್ ಮಚಕೂರಿ, ಅರ್ಜುನ ಬಿರಾದಾರ ಮುಂತಾದವರು ಇದ್ದರು. ಸುಜಾತಾ ಪಾಟೀಲ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರ್ವಹಿಸಿದರು. ನಾಗರತ್ನಾ ಪ್ರಭಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.