ADVERTISEMENT

‘ಶಾಂತಿಯಿಂದ ಜೀವನ ಸಮೃದ್ಧಿ-’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 6:06 IST
Last Updated 4 ಜನವರಿ 2014, 6:06 IST

ಬಸವಕಲ್ಯಾಣ:  ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಸಾರಿದ ಶಾಂತಿ ತತ್ವದ ಪಾಲನೆಯಿಂದ ಜೀವನದಲ್ಲಿ ಸಮೃದ್ಧಿ ಸಾಧ್ಯ ಎಂದು ದಲಿತ ಮುಖಂಡ ಸುರೇಶ ಮೋರೆ ಹೇಳಿದರು.

ಇಲ್ಲಿನ ತಹಶೀಲ್ದಾರ್‌ ಕಚೇರಿಯ ಹಳೆಯ ಕಟ್ಟಡದ ಸಭಾಂಗಣದಲ್ಲಿ ಶುಕ್ರವಾರ ದಲಿತ ಸಂಘಟನೆಗಳಿಂದ ಹಮ್ಮಿಕೊಂಡ ಭೀಮಾ ಕೋರೆಗಾಂವ್‌ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೀಮಾ ಕೋರೆಗಾಂವ ವಿಜಯದ ದಿನ ದಲಿತರ ಇತಿಹಾಸದಲ್ಲಿ ಸುವ­ರ್ಣಾ­ಕ್ಷರಗಳಿಂದ ಬರೆದಿಡುವ ದಿನ. ಅಂದು ಶೋಷಣೆಯ ವಿರುದ್ಧ ಗೆಲುವು ಸಾಧಿಸಲಾಗಿತ್ತು ಎಂದರು.

ಮನುವಾದದ ಕಟ್ಟಾ ಪ್ರತಿಪಾದಕ ಪೇಶ್ವೆರಾಜ 2ನೇ ಬಾಜಿರಾಯನ 30ಸಾವಿರ ಸೈನ್ಯದ ಜೊತೆ ಮಹಾರ ಬಟಾಲಿಯನ್‌ನ 500 ಸೈನಿಕರು 1818ರಂದು ನಿರಂತರ 24ಗಂಟೆ ಯುದ್ಧ ನಡೆಸಿ, ವಿಜಯ ಸಾಧಿಸಿದ್ದರ ಸ್ಮರಣ ದಿನ ಎಂದರು.

ಪ್ರೊ. ಬಾಪುಸಾಹೇಬ ಗಾಯಕ­ವಾಡ ಮಾತನಾಡಿ, ದಲಿತರಲ್ಲಿ ಐಕ್ಯತೆ ಮೂಡಿದಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ. ಸಚ್ಚ್ಯಾರಿತ್ರ್ಯ ಬೆಳೆಸಿಕೊಳ್ಳಬೇಕು. ಪಂಚಶೀಲ ತತ್ವ ಅಳವಡಿಸಿಕೊಳ್ಳಬೇಕು ಎಂದರು.

ಮಹಾರಾಷ್ಟ್ರದ ಫಕೀರಾ ದಳದ ಅಧ್ಯಕ್ಷ ಸತೀಶ ಕಸಬೆ ಮಾತನಾಡಿ, ಬುದ್ಧ ಮಾರ್ಗದಿಂದ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂದರು. ಬಸವಂತಪ್ಪ ಉಬಾಳೆ, ಯಶವಂತ ತಳೇಕರ ಮಾತನಾಡಿದರು.

ಈಚೆಗೆ ಡಾಕ್ಟರೇಟ್ ಪಡೆದ ಜೈಶೇನಪ್ರಸಾದ, ಶ್ರೀಕಾಂತ ಹುಬ್ಬಾರೆ, ಗೌತಮ ಕಾಂಬಳೆ, ಸುಹಾಸ ಕಾಂಬಳೆ, ನರೇಂದ್ರ ಸಿಂಧೆ, ಗೌತಮ ಸಿಂಧೆ ಅವರನ್ನು ಸನ್ಮಾನಿಸಲಾಯಿತು. ಭಂತೆ ಸಂಘಾನಂದ ನೇತೃತ್ವ ವಹಿಸಿದ್ದರು.

ನರಸಿಂಗ ಕಾಂಬಳೆ, ಮನೋಹರ ಮೈಸೆ, ಸದಾನಂದ ಭೋಸ್ಲೆ, ಶಶಿಕಾಂತ ಗಾಯಕವಾಡ, ವಿಜಯಕುಮಾರ ಡಾಂಗೆ, ರಮೇಶ ಉಮಾಪುರೆ,  ನಾಗನಾಥ ವಾಡೇಕರ, ಜ್ಞಾನದೇವ ಲಾಖೆ, ಸಂಜೀವ ಖೇಲೆ, ವಾಮನ ಮೈಸಲಗೆ, ದಮಯಂತಿ ಮೈಸೆ, ರಾಹುಲ ಕಾಂಬಳೆ, ಗೌತಮ ಜ್ಯಾಂತೆ, ಶಿವಶರಣ ಭಜಂತ್ರಿ ಮತ್ತಿತರರು ಇದ್ದರು. ದಿಗಂಬರ ಸ್ವಾಗತಿಸಿದರು. ಅನಿಲ ಶಾಸ್ತ್್ರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.